ಮೈಸೂರು: ಮಾವನ ಮೇಲೆ ಮುನಿಸಿನಿಂದ ಗಂಡನಿಗೆ ಪತ್ರ ಬರೆದು ಪೊಲೀಸಪ್ಪನ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ನಗರದ ಹೆಬ್ಬಾಳದ ಪೊಲೀಸರು ಬಡಾವಣೆಯಲ್ಲಿ ಈ ಘಟನೆ ನಡೆದಿದೆ.ಚೈತ್ರಾ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. 5 ತಿಂಗಳ ಹಿಂದೆ ಮೇಟಗಳ್ಳಿ ಪೊಲೀಸ್ ಠಾಣೆಯ ಪೇದೆ ಮೋಹನ್ ಆರಾಧ್ಯನನ್ನು ಚೈತ್ರಾ ಮದುವೆಯಾಗಿದ್ದರು. ಮದುವೆಯಾದ ದಿನದಿಂದ ಮಾವ ಸರಿಯಾಗಿ ಮಾತನಾಡಿಸಿಲ್ಲ. ನನ್ನ ಜೊತೆಗೆ ತಂದೆ ಹಾಗೂ ತಾಯಿಗೂ ಮಾವನವರಿಂದ ಗೌರವ ಸಿಕ್ಕಿಲ್ಲ. ತವರು ಮನೆಗೆ ಹೋಗುವಾಗ ವೇಳೆ ಕೂಡ ಅವಮಾನ ಮಾಡಿದ್ದಾರೆ. ನಿಮ್ಮ ಅಪ್ಪನೇ ನನಗೆ ಹೀಗೆ ಆಗಲು ಕಾರಣ. ನಿಮ್ಮ ಅಪ್ಪನ ಇಷ್ಟದಂತೆ ಮದುವೆ ಮಾಡಿಕೊಟ್ಟಿಲ್ಲ ಎಂದಿದ್ದರು.ನಮ್ಮ ಮನೆಯವರ ಶಕ್ತಿಯಾನುಸಾರ ಮದುವೆ ಮಾಡಿದ್ದಾರೆ. ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆಯೇ ಆವರೇ ಕಾರಣ ಎಂದು ಮಾವ ಮಲ್ಲಾರಾಧ್ಯ ಮೇಲೆ ಆರೋಪಿಸಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


