ಹಾಸನ: ಕೆಲವರಿಗೆ ಇದೇ ಖಾತೆ ಬೇಕು ಎಂಬ ಆಸೆ ಇರಬಹುದು. ಆದರೆ ಎಲ್ಲರಿಗೂ ಒಂದೇ ಖಾತೆ ಕೊಡಲು ಆಗುತ್ತಾ? ಕೊಟ್ಟ ಖಾತೆಗೆ ಜೀವ ತುಂಬಬೇಕು ಎಂದು ಹಾಸನದಲ್ಲಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಸಚಿವರು, ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡ ಕೆಲ ಸಚಿವರಿಗೆ ಕೊಟ್ಟಿರುವ ಖಾತೆಗೆ ಜೀವ ತುಂಬುವಂತೆ ಕಿವಿಮಾತು ಹೇಳಿದ್ದಾರೆ. ತಮ್ಮ ಖಾತೆ ಬದಲಾವಣೆ ವಿಷ್ಯಕ್ಕೆ ಪ್ರತಿಕ್ರಿಸಿದ ಅವರು, ಯಾವ ಖಾತೆ ಕೊಟ್ಟರು ಅದಕ್ಕೆ ಜೀವತುಂಬುವ ಶಕ್ತಿ ನನ್ನಲ್ಲಿದೆ ಎಂದರು.ಯುವ ಪೀಳಿಗೆ ಹಫೀಮು, ಗಾಂಜಾ, ಡ್ರಗ್ಸ್ ನಿಂದ ಹಾಳಾಗುತ್ತಿದ್ದಾರೆ. ಪೊಲೀಸರಿಂದ ತನಿಖೆ ಮಾಡಿಸಿ ಅವರನ್ನು ಬಲಿ ಹಾಕುವ ಕೆಲಸ ಮಾಡುತ್ತೇವೆ. ಎಲ್ಲಾ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದೇನೆ. ಏನು ಬದಲಾವಣೆ ತರಲು ಯೋಚನೆ ಮಾಡಿದ್ದೇನೆ. ನಾಳೆ ಸಭೆ ನಂತರ ಘೋಷಣೆ ಮಾಡುತ್ತೇನೆ. ಸರ್ಕಾರಕ್ಕೆ ಆದಾಯ ಹೇಗೆ ತರಬೇಕು ಎನ್ನುವುದರ ಜೊತೆಗೆ ಜೊತೆಗೆ ಉತ್ತಮ ಮದ್ಯ ದೊರೆಯುವಂತೆ ಮಾಡುತ್ತೇನೆ ಎಂದು ತಿಳಿಸಿದರು.ಇದೇ ವೇಳೆ ಮಾತನಾಡಿದ ಅವರು, ಖಾತೆ ಬದಲಾವಣೆಯಿಂದ ವ್ಯತ್ಯಾಸವೇನಿಲ್ಲ. ಯಾವುದೇ ಸಮಸ್ಯೆ ಬಂದರು ಆಯಾ ಸಚಿವರ ಗಮನಕ್ಕೆ ತರುತ್ತೇನೆ. ಆಹಾರ ಖಾತೆಯನ್ನು ಕೋವಿಡ್ ಸಂದರ್ಭದಲ್ಲಿ ವಹಿಸಿದರು. ನಾನು ಹೆದರಲಿಲ್ಲ, ಎಲ್ಲಿ ಸಮಸ್ಯೆ ಇದೆ ಫೋನ್ ಬಂದ ಕೂಡಲೇ ಹೋಗಿ ಸ್ಪಂದಿಸಿದ್ದೇನೆ. ನನಗೆ ತೃಪ್ತಿ ಇದೆ. ಯಾವುದೇ ಖಾತೆ ಕೊಟ್ಟರು ನಿಭಾಯಿಸುವ ಶಕ್ತಿಯಿದೆ ಎಂದು ಹೇಳಿದರು.Sign in to your account
Username or Email Address


Password

 Remember Me


