ಬೆಂಗಳೂರು: ಬಹುಭಾಷೆಯ ಬೇಡಿಕೆ ನಟ ಡಾಲಿ ಧನಂಜಯ್ ಹಳ್ಳಿ ಮಕ್ಕಳೊಂದಿಗೆ ಗಣರಾಜ್ಯೋತ್ಸವನ್ನು ಆಚರಿಸಿ ಮಕ್ಕಳಿಗೆ ಸ್ವಾತಂತ್ರ್ಯದ ಪಾಠವನ್ನು ಹೇಳಿಕೊಟ್ಟಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.ನಿಮ್ಮ ಜೊತೆ ಗಣರಾಜ್ಯೋತ್ಸವ ಆಚರಿಸಿದ್ದು ತುಂಬ ಖುಷಿ ಆಯ್ತು. ನಾವು ಈ ದಿನವನ್ನು ಯಾಕೆ ಆಚರಿಸುತ್ತೇವೆ? ಸಂವಿಧಾನ ಎಂದರೆ ಏನು ಗೊತ್ತಾ? ಎನ್ನತ್ತಾ ಮಕ್ಕಳಿಗೆ ಸರಳವಾಗಿ ಸಂವಿಧಾನದ ಕುರಿತಾಗಿ ಹೇಳಿದ್ದಾರೆ. ಸಿಂಪಲ್ ಆಗಿ ಹೇಳಬೇಕೆಂದರೆ ಈ ಶಾಲೆ ನಡೆಸಲು ಒಂದು ರೀತಿ-ನೀತಿ ಇರುತ್ತಲ್ವಾ? ಶಾಲೆಗೆ ಬಂದರೆ ಎಲ್ಲರೂ ಸಮಾನರು. ಎಲ್ಲರಿಗೂ ಸಮಾನವಾದ ಹಕ್ಕಿದೆ. ನಿಮ್ಮ ಶಿಕ್ಷಕರಿಗೆ ನೀವು ಪ್ರಶ್ನೆ ಕೇಳಬಹುದು. ಶಾಲೆ ನಡೆಸಲು ಇರುವ ಈ ರೀತಿ-ನೀತಿಗಳ ಹಾಗೆಯೇ ದೇಶವನ್ನು ನಡೆಸಲು ಒಂದು ರೀತಿ-ನೀತಿ ಇರಬೇಕಲ್ಲವೇ ಎಂದು ಮಕ್ಕಳಿಗೆ ಪ್ರಶ್ನಿಸಿದ್ದಾರೆ.ನೀವೆಲ್ಲ ಮಕ್ಕಳು. ಏನಾದರೂ ಹೇಳಿದರೆ ತುಂಬ ಚೆನ್ನಾಗಿ ಕೇಳುತ್ತೀರಿ. ಸರಿ-ತಪ್ಪು ಯಾವುದು ಎಂದು ಹೇಳಿದರೆ ನಿಮಗೆ ಅರ್ಥ ಆಗುತ್ತದೆ. ಆದರೆ ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಭ್ರಷ್ಟನಾಗುತ್ತಾನೆ. ನಾನು ಅಷ್ಟೇ ಎಂದು ಸ್ವಾರ್ಥಿಯಾಗಿ ಬಿಡುತ್ತಾನೆ. ಹೀಗಾಗಿ ದೇಶ ನಡೆಸಲು ಕಷ್ಟ ಆಗುತ್ತದೆ. ಅದಕ್ಕೆ ಅಂಬೇಡ್ಕರ್ ರೀತಿಯ ಹಿರಿಯರು ಸೇರಿಕೊಂಡು ದೇಶ ನಡೆಸೋಕೆ ಅಂತಾನೇ ಒಂದು ಅದ್ಭುತವಾದ ಗ್ರಂಥ ರಚಿಸಿದ್ದಾರೆ. ಎಲ್ಲರಿಗೂ ಒಳ್ಳೆದಾಗಬೇಕು, ಸಮಾನ ಮನೋಭಾವ ಜೀವನ ನಡೆಸಬೇಕು ಎಂದು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಅದನ್ನು ನಾವೆಲ್ಲರೂ ಒಪ್ಪಿಕೊಂಡಂತಹ ದಿನವಿದು. ಅದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಅದನ್ನು ಇಟ್ಟುಕೊಂಡೇ ದೇಶವನ್ನು ನಡೆಸಬೇಕು ಎಂದು ಸಂವಿಧಾನದ ಬಗ್ಗೆ ಮಕ್ಕಳಿಗೆ ಧನಂಜಯ ವಿವರವಾಗಿ ತಿಳಿ ಹೇಳಿದ್ದಾರೆ.ನೀವೆಲ್ಲರೂ ಈಗ ಹೈಸ್ಕೂಲ್‍ನಲ್ಲಿ ಓದುತ್ತಿದ್ದೀರಿ. ಮುಂದಿನ ಕೆಲವೇ ವರ್ಷಗಳಲ್ಲಿ ವೋಟ್ ಹಾಕುತ್ತೀರಿ. ಅದಕ್ಕಾಗಿ ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ಗೊತ್ತಿರಬೇಕು. ಒಂದು ವೋಟಿಗೆ ಇಂತಿಷ್ಟು ದುಡ್ಡು ಅಂತ ನೀಡಿ ರಾಜಕಾರಣಿಗಳು ಪ್ರಜೆಗಳ ಅಧಿಕಾರವನ್ನು ಕಸಿದುಕೊಳ್ಳುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಉಳಿದಂತೆ ಆಗುವುದಿಲ್ಲ. ಮುಂದೆ ನೀವು ವೋಟ್ ಹಾಕುವಾಗ ಯಾವುದೇ ಕಾರಣಕ್ಕೂ ದುಡ್ಡು ತೆಗೆದುಕೊಳ್ಳುವುದಿಲ್ಲ ಅಂತ ನೀವೆಲ್ಲ ಶಪಥ ಮಾಡಬೇಕು. ಆಗ ದೇಶ ಚೆನ್ನಾಗಿರುತ್ತದೆ. ದೇಶ ಅಂದ್ರೆ ಜಾಗವಲ್ಲ ಜನ. ಕೂಡಿ ಆಟ ಪಾಠವನ್ನು ಕೇಳಿ ಒಟ್ಟಾಗಿರಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದ್ದಾರೆ.ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್ ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್‍ನಲ್ಲಿದ್ದಾರೆ. ಸಿನಿಮಾ ತಂಡದ ಜೊತೆಯಲ್ಲಿ ಹಳ್ಳಿಯೊಂದರಲ್ಲಿ ಬೀಡು ಬಿಟ್ಟಿದ್ದಾರೆ. ಈ ವೇಳೆ ಅಲ್ಲಿನ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಗಣರಾಜ್ಯೋತ್ಸವ ಆಚರಿಸಿದ್ದಾರೆ. ಆ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


