ವಿಜಯಪುರ: ನಾಗಠಾಣ ಶಾಸಕ ದೇವಾನಂದ್ ಚವ್ಹಾಣ್ ಅವರ ಸಹೋದರ ಗಂಗಾರಾಮ್ ಚವ್ಹಾನ್ ಬೈಕ್ ಅಫಘಾತದಲ್ಲಿ ಮೃತರಾಗಿದ್ದಾರೆ. ವಿಜಯಪುರ ಜಿಲ್ಲೆಯ ಹಿಟ್ನಳ್ಳಿ ಗ್ರಾಮದಲ್ಲಿ ಅಪಘಾತ ನಡೆದಿದೆಇಂಡಿ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ಗಂಗಾರಾಮ ಅವರು ಬೈಕ್ ನಲ್ಲಿ ಹೊರಟಾಗ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ತೀವ್ರತೆ ಗಂಗಾರಾಮ್ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಂಗಾರಾಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಗಂಗಾರಾಮ್ ಹಿಟ್ನಳ್ಳಿಯ ಜಗದಂಬಾ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಗಂಗಾರಾಮ್ ಅವರ ಸಾವಿನಿಂದ ಶಾಸಕರ ಕುಟುಂಬದಲ್ಲಿ ಸೂತಕ ಆವರಿಸಿದೆ. ಗಂಗಾರಾಮ್ ಅಂತ್ಯಕ್ರಿಯೆ ಬುಧವಾರ ಹಿಟ್ನಳ್ಳಿ ತಾಂಡಾದಲ್ಲಿ 11 ಗಂಟೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.Sign in to your account
Username or Email Address


Password

 Remember Me


