ಶಿವಮೊಗ್ಗ : ನಮ್ಮ ದೇಶದಲ್ಲಿ ಏನಾದರೂ ಹೊಸ ಬದಲಾವಣೆ ಆಗಬೇಕು ಅಂದರೆ ಅದು ಹೋರಾಟದಿಂದ ಮಾತ್ರ. ಹೋರಾಟವಿಲ್ಲದೇ ಬದಲಾವಣೆ ಸಾಧ್ಯವಿಲ್ಲ. ಹೀಗಾಗಿ ರೈತರು ಹೋರಾಟವನ್ನು ನಿಲ್ಲಿಸಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ.ದೆಹಲಿಯ ಟ್ರ್ಯಾಕ್ಟ ರ್ ಪೆರೇಡ್ ಬೆಂಬಲಿಸಿ, ಶಿವಮೊಗ್ಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ನಡೆದ ರೈತರ ರಾಜ್ಯೋತ್ಸವ ಪೆರೃಡ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಹೋರಾಟದ ನೆಲವಾಗಿದೆ. ದೆಹಲಿಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ನೀವೆಲ್ಲಾ ಒಂದು ವರ್ಷವಾದರೂ ಸಹ ಹೋರಾಟ ನಡೆಸಬೇಕಾಗುತ್ತದೆ ಎಂದರು.ಹೊಸ ಹೋರಾಟಕ್ಕೆ ನಾಂದಿ: ಹೋರಾಟವಿಲ್ಲದೆ ನಮ್ಮ ದೇಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಿಮ್ಮ ಹೋರಾಟ ಈಗ ಪ್ರಾರಂಭವಾಗಿದೆ. ಇದನ್ನು ಮುಂದುವರಿಸಬೇಕಿದೆ. ನಿಮ್ಮ ಹೋರಾಟದಿಂದ ಹೊಸ ಹೋರಾಟಕ್ಕೆ ನಾಂದಿಯಾಗಬೇಕು. ಸಮಾಜದಲ್ಲಿ ಏರುಪೇರು ಹೋಗಲಾಡಿಸಬೇಕು. ಹೋರಾಟದ ಕೀ ಅನ್ನು ಕೈಯಲ್ಲಿ ಹಿಡಿದು ಹೋಗಬೇಕಿದೆ. ಹಿಂದೆ ನಾವು ಉಳುವವನೆ ಭೂ ಒಡೆಯ ಎಂದು ಹೋರಾಟ ಮಾಡಿ ಗೆಲುವು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಹೋರಾಟಕ್ಕೆ ಯಶಸ್ಸು ಲಭ್ಯವಾಗುತ್ತದೆ. ಹೋರಾಟದಿಂದ ಹಿಂದಕ್ಕೆ ಹೋಗಬಾರದು. ನಿಮ್ಮ ಹೋರಾಟದಿಂದ ಕೇವಲ ನಿಮಗೆ ಮಾತ್ರ ಅಲ್ಲ, ಎಲ್ಲರಿಗೂ ಅನುಕೂಲವಾಗುತ್ತದೆ. ಎಂದರು.ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾದ ಕೆ.ಟಿ.ಗಂಗಾಧರ್, ಹೋರಾಟಗಾರ ಶ್ರೀಪಾಲ್, ಬಂಡಾಯ ಸಾಹಿತಿ ಸಿದ್ದನಗೌಡ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಯೋಗೀಶ್, ನಾಗರಾಜ್, ದಲಿತ ಸಂಘಟನೆಯ ಗುರುಮೂರ್ತಿ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.Sign in to your account
Username or Email Address


Password

 Remember Me


