ಚಿತ್ರದುರ್ಗ: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೊಮ್ಮನಪಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ನಡೆದಿದೆ.ಮೃತರನ್ನು ವನಜಾಕ್ಷಿ(36), ಮಹೇಂದ್ರ(50) ಎಂದು ಗುರುತಿಸಲಾಗಿದೆ. ಮಾರುತಿ ಕಾರಲ್ಲಿದ್ದ ವನಜಾಕ್ಷಿ ಅವರು ಬೆಂಗಳೂರು ಮೂಲದವರು. ಇನ್ನು ಹುಂಡೈ ಕಾರಲ್ಲಿ ಚಿತ್ರದುರ್ಗ ಮೂಲದ ಮಹೇಂದ್ರ ಇದ್ದರು. ಇನ್ನು ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಮೊಳಕಾಲ್ಮೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.






 Advertisement 




Sign in to your account
Username or Email Address


Password

 Remember Me


