ಬೆಂಗಳೂರು:  ಕಳೆದ ಬಾರಿ ಜಯಶ್ರೀ ಆತ್ಮಹತ್ಯೆ ಮಾಡುತ್ತೇನೆ ಎಂದಾಗ ನಾನು ಸಾಂತ್ವನ ಹೇಳಿ ಧೈರ್ಯ ತುಂಬಿದ್ದೆ ಎಂದು ನಟಿ ಅಶ್ವಿತಿ ಶೆಟ್ಟಿ ಹೇಳಿದ್ದಾರೆ.ಬಿಗ್‌ ಬಾಸ್ ಜಯಶ್ರೀ ಆತ್ಮಹತ್ಯೆ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ ಪ್ರತಿಕ್ರಿಯಿಸಿದ ಅವರು, ಅವರನ್ನು ಮಾತಾಡಿಸಿ ತುಂಬಾ ದಿನ ಆಯ್ತು. ಕಳೆದ ಬಾರಿ ನಾನು ಸಾಂತ್ವನ ಹೇಳಿದ್ದೆ ಎಂದು ತಿಳಿಸಿದರು.ಸಾಂತ್ವನ ಹೇಳಿದ ಬಳಿಕ ನಾನು ಜಯಶ್ರೀ ಸಂಪರ್ಕಕ್ಕೆ ಬಂದಿಲ್ಲ. ಒಮ್ಮೆ ಒಮ್ಮೆ ಕಾಲ್ ಮಾಡಿ ನಾನು ಆರಾಮವಾಗಿದ್ದೇನೆ. ಡ್ಯಾನ್ಸ್ ಕ್ಲಾಸ್ ಸೇರಿದ್ದೇನೆ ಎಂದು ತಿಳಿಸಿದ್ದರು. ಅದಾದ ಮೇಲೆ ನನ್ನ ಸಂಪರ್ಕಕ್ಕೆ ಸಿಗಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತಿಂಗಳ ಹಿಂದೆಯಷ್ಟೇ ವೃದ್ಧಾಶ್ರಮ ಸೇರಿದ್ದ ಜಯಶ್ರೀ!ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಜಯಶ್ರೀ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಜಯಶ್ರೀ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.ಈ ಹಿಂದೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದ ಜಯಶ್ರೀ, ‘ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಸ್ವಲ್ಪ ಸಮಯದ ನಂತರ ಆ ಪೋಸ್ಟನ್ನು ಡಿಲೀಟ್ ಮಾಡಿ, ‘ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ’ ಎಂದು ಮತ್ತೆ ಪೋಸ್ಟ್ ಮಾಡಿದ್ದರು. ಮಾನಸಿಕ ಖಿನ್ನತೆಗೆ ಜಾರಿದ್ದ ಜಯಶ್ರೀ ಇಂದು ನೇಣಿಗೆ ಶರಣಾಗಿದ್ದಾರೆ.Sign in to your account
Username or Email Address


Password

 Remember Me


