ಕಲಬುರಗಿ: ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳಲಾರದೇ ಅನಾಥಾಶ್ರಮಕ್ಕೆ ಕಲಿಸುವ ಈ ಕಾಲದಲ್ಲಿ ಇಲ್ಲೂಬ್ಬ ಆಧುನಿಕ ದಶರಥ ತಂದೆ ತಾಯಿಯ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಕೆಲವರಿಗೆ ವಯಸ್ಸಾದ್ದರೆ ತಂದೆ ತಾಯಿಯನ್ನು ನೋಡಿಕೊಳ್ಳುವುದೆ ಒಂದು ದೊಡ್ಡ ಕಷ್ಟದ ಕೆಲಸ ಅಂತ ಕೆಲ ಮಕ್ಕಳ ಅಂತಾರೆ. ಆಳಂದ ತಾಲೂಕಿನ ನಿರಗೂಡಿ ಗ್ರಾಮದ ದಶರಥ ಪಾತ್ರೆ ತಮ್ಮ ಪೋಷಕರ ನೆನಪಿಗಾಗಿ ಸುಮಾರು 2 ಲಕ್ಷ ರೂ. ಹಣ ಖರ್ಚು ಮಾಡಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.ನಿರಗುಡಿ ಗ್ರಾಮದ ದಶರಥ ಪಾತ್ರೆ ಅವರ ತಂದೆ ವಿಶ್ವನಾಥ್ ಹಾಗೂ ತಾಯಿ ಲಕ್ಷ್ಮಿಬಾಯಿ ಇಬ್ಬರೂ ಕೂಡ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಇವರ ಪುಣ್ಯ ಸ್ಮರಣಾರ್ಥವಾಗಿ ಇಂದು ಗ್ರಾಮದಲ್ಲಿ ಗುಡಿ ಕಟ್ಟಿ ಮೂರ್ತಿ ಕೂರಿಸಿದ್ದಾರೆ.ತನ್ನ ಪೋಷಕರು ಜೊತೆಗೆ ಇಲ್ಲದೆ ಇದ್ದರು ಕಣ್ಣಿಗೆ ಕಾಣುವ ದೇವರಾಗಿರಬೇಕೆಂಬ ಮಹದಾಸೆಯಿಂದ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪಿಸಿರುವ ದಶರಥ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸುಂದರವಾದ ಮೂರ್ತಿ ಕೆತ್ತೆನೆಗಾಗಿ ದಶರಥ ನೆರೆಯ ರಾಜ್ಯ ಮಹಾರಾಷ್ಟ್ರದ ಪಂಡರಾಪೂರದ ಶಿಲ್ಪಿಗಳನ್ನು ಸಂಪರ್ಕಿಸಿ ಮೂರ್ತಿ ಕೆತ್ತನೆ ಮಾಡಿಸಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


