ಬೆಂಗಳೂರು: ಭಾನುವಾರ ನಡೆಯಬೇಕಿದ್ದ ಎಫ್‍ಡಿಎ ಪರೀಕ್ಷೆಯನ್ನ ಮುಂದೂಡಲಾಗಿದೆ ಎಂದು ಕೆಪಿಎಸ್‍ಸಿ ಕಾರ್ಯದರ್ಶಿ ಜಿ. ಸತ್ಯವತಿ ಮಾಹಿತಿ ನೀಡಿದ್ದಾರೆ.ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆಯ ಪರೀಕ್ಷೆಯನ್ನ ಮುಂದೂಡಲಾಗಿದ್ದು, ಕೆಪಿಎಸ್‍ಸಿ ಶೀಘ್ರದಲ್ಲಿ ಪರೀಕ್ಷಾ ದಿನಾಂಕ ಪ್ರಕಟಿಸಲಿದೆ. 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ 1,114 ಪೋಸ್ಟ್ ಗಳಿಗೆ ಪರೀಕ್ಷೆ ನಡೆಯುತ್ತಿತ್ತು. 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಿದ್ಧಗೊಂಡಿದ್ದರು.ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಚಪ್ಪ, ಚಂದ್ರು ಸೇರಿದಂತೆ ಒಟ್ಟು ನಾಲ್ವರ ಬಂಧನವಾಗಿದ್ದು, ಬಂಧಿತರಿಂದ 24 ಲಕ್ಷ ನಗದು, 3 ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಹಿತಿಯನ್ನ ಸಿಸಿಬಿ ಪೊಲೀಸರು ಕೆಪಿಎಸ್‍ಸಿ ಗೆ ನೀಡುತ್ತಿದ್ದಂತೆ ಪರೀಕ್ಷೆ ಮುಂದೂಡಿ ಜಿ.ಸತ್ಯವತಿ ಆದೇಶಿದ್ದಾರೆ. ರಾಜ್ಯಾದ್ಯಂತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.Sign in to your account
Username or Email Address


Password

 Remember Me


