ಬೆಂಗಳೂರು: ಗೋವಾ ಮೂಲಕ ವ್ಯಕ್ತಿಯೊಬ್ಬ ಹೋಟೆಲ್ ಬಿಲ್ ಪಾವತಿಸದೇ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೆ ತಾನು ದೊಡ್ಡ ವಿಐಪಿ ಎಂಬಂತೆ ಬಾಡಿಗಾರ್ಡ್ ಗಳನ್ನು ಮುಂದಿಟ್ಟುಕೊಂಡು ನಟಿಸಿ ಹೋಟೆಲ್‍ನವರ ಕಣ್ಣಿಗೆ ಮಣ್ಣೆರಚಿದ್ದಾನೆ.ಆರೋಪಿಯನ್ನು ಸ್ವಪ್ನಿಲ್ ನಾಯ್ಕ್ ಎಂದು ಗುರುತಿಸಲಾಗಿದೆ. 1,43,243 ಬಿಲ್ ಪಾವತಿಸುವ ಸಮಯ ಬಂದಾಗ ಆರೋಪಿಗಳು ಹೋಟೆಲ್‍ನಿಂದ ಪರಾರಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಬಾಡಿಗಾರ್ಡ್ ಗಳಿಗೂ ಹಣ ನೀಡದೆ ಮೋಸ ಮಾಡಿರುವ ಸತ್ಯ ಬೆಳಕಿಗೆ ಬಂದಿದೆ.ತನಿಖೆ ವೇಳೆ ಆರೋಪಿ ನಾಯ್ಕ್, ಜನವರಿ 2 ರಂದು ಬೆಂಗಳೂರಿನ ಗಾಂಧಿನಗರದ ಜಿಯಾನ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ್ದಾನೆ. 6 ದಿನಗಳ ನಂತರ ನಾಯ್ಕ್ ಪತ್ನಿ ಕೂಡ ಆತನ ಜೊತೆಗೂಡಿ ಹೋಟೆಲ್‍ನಲ್ಲಿ ತಂಗಿದ್ದಳು. ಅಲ್ಲದೆ ಬಾಡಿಗಾರ್ಡ್‍ಗಳಿಗೂ ಇನ್ನೂ ಎರಡು ರೂಮ್‍ಗಳನ್ನು ಬುಕ್ ಮಾಡಿದ್ದರು.ಬಿಲ್ ಪಾವತಿಸುವ ದಿನ ಬರುತ್ತಿದ್ದಂತೆಯೇ ಆರೋಪಿ ಮತ್ತು ಆತನ ಹೆಂಡತಿ ರಾಮನಗರಕ್ಕೆ ಹೋಗುವ ಮಿನಿ ಬಸ್ ಹತ್ತಿ ಪರಾರಿಯಾಗಿದ್ದಾರೆ. ಇದೇ ವೇಳೆ ಆರೋಪಿಗಳನ್ನು ಹೋಟೆಲ್ ಸಿಬ್ಬಂದಿ ಕಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ ಆರೋಪಿಗಳು ಮಿನಿ ಬಸ್ ಕಂಪನಿ ಮತ್ತು ಆತನ ಬಾಡಿಗಾರ್ಡ್ ಗೆ ಸಹ ಹಣ ನೀಡದೇ ದ್ರೋಹ ಬಗೆದಿದ್ದಾರೆ ಎಂದು ತಿಳಿದುಬಂದಿದೆ.ಒಟ್ಟಾರೆ 1,43,243 ರೂಪಾಯಿ ಬಿಲ್ ಪಾವತಿಸದೇ ಆರೋಪಿಗಳು ಹೋಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


