ಬೆಂಗಳೂರು: ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್, ಈ ಬಾರಿ ಮಹಾಮಾರಿ ಕೊರೊನಾ ಲಾಕ್‍ಡೌನ್ ನಿಂದಾಗಿ ಜನವರಿಗೆ ಮುಂದೂಡಲ್ಪಟ್ಟಿತ್ತು. ಆದರೆ ಜನವರಿ ಕೊನೆಯಾಗುತ್ತಾ ಬಂದರೂ ಇನ್ನೂ ಬಿಗ್ ಬಾಸ್ ಆರಂಭವಾಗಿಲ್ಲ ಎಂದು ಅಭಿಮಾನಿಗಳು ಬೇಸರ ಪಡುತ್ತಿದ್ದಾಗಲೇ ಇದೀಗ ನಿರೂಪಕ ಕಿಚ್ಚ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಹೌದು, ಈ ಸಂಬಂಧ ಪ್ರಮೋ ಶೂಟ್ ನಲ್ಲಿ ಭಾಗವಹಿಸಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್, ಬಿಗ್ ಬಾಸ್ ಸೀಸನ್ 8ರ ಪ್ರೋಮೋ ಶೂಟ್ ನಡೆಯುತ್ತಿದೆ. ಸದ್ಯದಲ್ಲಿಯೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.Tnx to all for luving and sharing ydays announcement.#VikrantRonaOnBurjKhalifa___________________________BigBoss season 8 soon.Promo shoot in progress pic.twitter.com/lyBBSenH2B— Kichcha Sudeepa (@KicchaSudeep) January 22, 2021ಇನ್ನು ಪ್ರತಿಬಾರಿ ‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಶೋ ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತದೆ. ಅಂತೆಯೇ ಈ ಬಾರಿ ಕೂಡ ಅದೇ ಸೆಟ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ತಿಂಗಳ ಹಿಂದೆಯೇ ಬಿಗ್ ಬಾಸ್ ಮನೆಯ ರಿಪೇರಿ ಕಾರ್ಯ ಶುರು ಮಾಡಲಾಗಿತ್ತು. ಈ ಬಾರಿ ಸ್ಪರ್ಧಿಗಳಿಗೆ ಸಪ್ರ್ರೈಸ್ ನೀಡುವಂತಹ ಥೀಮ್‍ನಲ್ಲಿ ಮನೆಯನ್ನು ರೆಡಿ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.ಈ ಹಿಂದೆ ಬಿಗ್‍ಬಾಸ್ ಪ್ರಸಾರವಾಗುವ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಜೊತೆ ನಟ ಕಿಚ್ಚ ಸುದೀಪ್ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಕೊರೊನಾ ಆತಂಕದ ನಡುವೆಯೂ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಬಿಗ್‍ಬಾಸ್ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿವೆ.Sign in to your account
Username or Email Address


Password

 Remember Me


