ಬೆಂಗಳೂರು: ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿದ ಮೂವರು ದರೋಡೆಕೋರರು ಕ್ಷಣಾರ್ಧದಲ್ಲಿ 7 ಕೋಟಿ ಬೆಲೆ ಬಾಳುವ ಬಂಗಾರ, ನಗದು ದೋಚಿ ಪರಾರಿಯಾಗಿರುವ ಘಟನೆ ಹೂಸೂರು ಕಚೇರಿಯಲ್ಲಿ ನಡೆದಿದೆ.ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಕಚೇರಿಗೆ ಮೂವರು ದುಷ್ಕರ್ಮಿಗಳು ನುಗ್ಗಿದ್ದಾರೆ. ಈ ವೇಳೆ ಕಚೇರಿಯಲ್ಲಿ ನಾಲ್ವರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ನಾಲ್ವರ ಕೈಕಟ್ಟಿ, ಬಾಯಿಗೆ ಗಮ್‍ಟೇಪ್ ಸುತ್ತಿದ್ದಾರೆ. ಬಂದೂಕು ತೋರಿಸಿ ನಾಲ್ವರನ್ನು ಬೆದರಿಸಿ ಕೀ ಕಸಿದುಕೊಂಡಿದ್ದಾರೆ. ನಂತರ ಲಾಕರ್ ಕೋಣೆಗೆ ನುಗ್ಗಿ ಬಂಗಾರ, ನಗದನ್ನು ಬ್ಯಾಗ್‍ಗೆ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.ಕಳ್ಳರು ದರೋಡೆ ವೇಳೆ ಮ್ಯಾನೇಜರ್ ಮೊಬೈಲ್‍ನ್ನು ಕಸಿದುಕೊಂಡು ಹೋಗಿದ್ದರು. ಆ ಮೊಬೈಲ್‍ನ ಜಿಪಿಎಸ್ ಸುಳಿವು ಬೆನ್ನತ್ತಿ ದರೋಡೆಕೋರರನ್ನು ಇದೀಗ ಬಂಧಿಸಲಾಗಿದೆ. ಈ ಪ್ರಕರಣ ನಡೆದ 24 ಗಂಟೆಯಲ್ಲಿ ಸೈಬರ್ ಬಾದ್ ನಲ್ಲಿ ದರೋಡೆಕೋರರನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.






 Advertisement 




Sign in to your account
Username or Email Address


Password

 Remember Me


