ಹುಬ್ಬಳ್ಳಿ: ಸೆಲ್ಫಿ ತೆದುಕೊಳ್ಳಲು ಹೋಗಿ ಕಿರೇಸೂರು ಬ್ರಿಡ್ಜ್ ಬಳಿ ಕಾಲುವೆ ಪಾಲಾಗಿದ್ದ ಮೂವರು ಯುವಕರ ಪೈಕಿ ಇಬ್ಬರ ಶವಗಳು ಇಂದು ಬೆಳಗ್ಗೆ ಪತ್ತೆಯಾಗಿದೆ. ಇನ್ನೋರ್ವನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.ಸನ್ನಿ ಜಾನ್ಸನ್ ಕಲ್ಲಕುಂಟ್ಲ ಹಾಗೂ ಗಜಾನನ ರಾಜಶೇಖರ್ ಶವ ಪತ್ತೆಯಾಗಿದೆ. ಇನ್ನೋರ್ವನಿಗಾಗಿ ಶೋಧಕಾರ್ಯ ಮುಂದುವರಿದಿದ್ದು, ನಿನ್ನೆ ತಡರಾತ್ರಿಯಿಂದಲೂ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡದಿಂದ ಶೋಧಕಾರ್ಯ ನಡೆಸಿದ್ದು ಬೆಳಗ್ಗೆ ಅಣ್ಣಿಗೇರಿಯ ಬಸಾಪುರ ಕಾಲುವೆ ಗೇಟ್ ಬಳಿ ಇಬ್ಬರ ಶವ ಪತ್ತೆಯಾಗಿವೆ.ನಿನ್ನೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಗಾಗಿ ಐವರು ತೆಳಿದ್ದರು. ಈ ವೇಳೆ ಗ್ರೂಪಾಗಿ ಎಲ್ಲರೂ ಸೆಲ್ಫಿ ತೆಗೆದುಕೊಳ್ಳಲು ರೆಡಿಯಾಗ್ತಿದ್ದಾಗ ಜೇನು ನೋಣಗಳು ದಾಳಿ ಮಾಡಿವೆ. ಪರಿಣಾಮ ಐವರು ಕಾಲುವೆಗೆ ಹಾರಿದ್ದರು. ಅದರಲ್ಲಿ ಓರ್ವ ಯುವತಿ ಹಾಗೂ ಒಬ್ಬ ಯುವಕನನ್ನು ಕುರಿಗಾಯಿಗಳು ರಕ್ಷಣೆ ಮಾಡಿದ್ದರು. ಮೂವರು ನಾಪತ್ತೆಯಾಗಿದ್ದರು. ಮೂವರಲ್ಲಿ ಇಬ್ಬರ ಶವ ದೊರೆತಿದ್ದು, ಇನ್ನೋರ್ವನ ಶವಕ್ಕೆ ಶೋಧ ನಡೆಯುತ್ತಿದೆ.ಸ್ಥಳದಲ್ಲಿ ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


