ಬೆಂಗಳೂರು: ಸ್ಯಾಂಡಲ್‍ವುಡ್ ನಶೆ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ 140 ದಿನಗಳ ಬಳಿಕ ಇಂದು ಮಧ್ಯಾಹ್ನದ ಪರಪ್ಪನ ಅಗ್ರಾಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಗುರುವಾರ ಜಾಮೀನು ಮಂಜೂರಾಗಿದೆ. ಬೇಲ್ ಸಿಕ್ಕ ಎರಡು ದಿನಗಳ ಬಳಿಕ ಅಂದ್ರೆ ಇಂದು ರಾಗಿಣಿಗೆ ಜೈಲಿನಿಂದ ರಿಲೀಸ್ ಭಾಗ್ಯ ದೊರೆಯಲಿದೆ.ಪ್ರಕರಣದ ಹಿನ್ನೆಲೆ:
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4 ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ರಾಗಿಣಿಗೆ ಇದೀಗ ಬರೋಬ್ಬರಿ 140 ದಿನಗಳ ಬಳಿಕ ರಾಗಿಣಿಗೂ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೊಹಿಂಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.ರಾಗಿಣಿ ಕಳೆದ 140 ದಿನಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ ವಶಪಡಿಸಿಕೊಂಡಿಲ್ಲ ಮತ್ತು ಸೇವಿಸಿಲ್ಲ. ಕೇವಲ ಆರೋಪಿ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿಯನ್ನು ಬಂಧಿಸಲಾಗಿತ್ತು. ಈಗಾಗಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಜಾಮೀನು ಸಿಕ್ಕಿದೆ. ಹಾಗಾಗಿ ಜಾಮೀನು ನೀಡಬೇಕೆಂದು ರಾಗಿಣಿ ಪರ ವಕೀಲ ಸಿದಾರ್ಥ ಲೂಥ್ರಾ ವಾದ ಮಂಡಿಸಿದ್ದರು.ಡ್ರಗ್ ಪತ್ತೆಹಚ್ಚಲು ಲ್ಯಾಬ್ ಫಲಿತಾಂಶಗಳನ್ನು ಹಾಳುಮಾಡುವ ಪ್ರಯತ್ನದಲ್ಲಿ ದ್ವಿವೇದಿ ನೀರನ್ನು ಮೂತ್ರದ ಮಾದರಿಯೊಂದಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಅಂಶಗಳು ಲೂಥ್ರಾ ನ್ಯಾಯಾಲಯದ ಗಮನಕ್ಕೆ ತಂದಿದ್ದರು.






 Advertisement 




Sign in to your account
Username or Email Address


Password

 Remember Me


