ಬೆಂಗಳೂರು: ರಾಜ್ಯದಲ್ಲಿಂದು 324 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 890 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 42,425 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇಂದು 81,519 ಜನ ಕೊರೊನಾ ಲಸಿಕೆ ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದರು. ಆದರೆ ಶೇ.52ರಷ್ಟು ಜನ ಮಾತ್ರ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ.ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ?: ಬಾಗಲಕೋಟೆ 1120, ಬಳ್ಳಾರಿ 1474, ಬೆಳಗಾವಿ 3787, ಬೆಂಗಳೂರು ಗ್ರಾಮಾಂತರ 998, ಬೆಂಗಳೂರು ನಗರ 7771, ಬೀದರ್ 669, ಚಾಮರಾಜನಗರ 368, ಚಿಕ್ಕಬಳ್ಳಾಪುರ 1184, ಚಿಕ್ಕಮಗಳೂರು 850, ಚಿತ್ರದುರ್ಗ 806, ದಕ್ಷಿಣ ಕನ್ನಡ 2081, ದಾವಣಗೆರೆ 2276, ಧಾರವಾಡ 520, ಗದಗ 493, ಹಾಸನ 1528, ಹಾವೇರಿ 334, ಕಲಬುರಗಿ 1100, ಕೊಡಗು 125, ಕೋಲಾರ 1091, ಕೊಪ್ಪಳ 82, ಮಂಡ್ಯ 1396, ಮೈಸೂರು 2084, ರಾಯಚೂರು 1340, ರಾಮನಗರ 670, ಶಿವಮೊಗ್ಗ 1856, ತುಮಕೂರು 2174, ಉಡುಪಿ 1615, ಉತ್ತರ ಕನ್ನಡ 1469, ವಿಜಯಪುರದಲ್ಲಿ 565 ಮತ್ತು ಯಾದಗಿರಿಯಲ್ಲಿ 569 ಜನರಿಗೆ ಲಸಿಕೆ ನೀಡಲಾಗಿದೆ.ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,34,576ಕ್ಕೆ ಏರಿಕೆಯಾಗಿದ್ದು, 6,985 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ ಮೂವರು ಮೃತಪಟ್ಟಿದ್ದು, ಸಾವನ್ನಪ್ಪಿದರವರ ಸಂಖ್ಯೆ 12,190ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 165 ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.34 ಮತ್ತು ಮರಣ ಪ್ರಮಾಣ ಶೇ.0.92ರಷ್ಟಿದೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 160, ಬೀದರ್ 1, ಚಾಮರಾಜನಗರ 3, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 9, ಚಿತ್ರದುರ್ಗ 8, ದಕ್ಷಿಣ ಕನ್ನಡ 12, ದಾವಣಗೆರೆ 5, ಧಾರವಾಡ 2, ಗದಗ 4, ಹಾಸನ 6, ಹಾವೇರಿ 0, ಕಲಬುರಗಿ 9, ಕೊಡಗು 5, ಕೋಲಾರ 3, ಕೊಪ್ಪಳ 0, ಮಂಡ್ಯ 3, ಮೈಸೂರು 19, ರಾಯಚೂರು 0, ರಾಮನಗರ 1, ಶಿವಮೊಗ್ಗ 1, ತುಮಕೂರು 18, ಉಡುಪಿ 3, ಉತ್ತರ ಕನ್ನಡ 3, ವಿಜಯಪುರ 3 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.Sign in to your account
Username or Email Address


Password

 Remember Me


