ಬೆಂಗಳೂರು: ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯ ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದ್ದಾರೆ.ಇಂದಿನಿಂದ ಮೂರು ದಿನಗಳ ಕಾಲ [ಶುಕ್ರವಾರದಿಂದ ಭಾನುವಾರದವರೆಗೆ] ಬೆಂಗಳೂರಿನ ಅಶೋಕ್ ಲಲಿತ್ ನಲ್ಲಿ ಪುರಾತನ, ಪಾರಂಪರಿಕ ಆಭರಣಗಳ ಮಾರಾಟ, ಪ್ರದರ್ಶನವನ್ನು ಆಯೋಜಿಸಲಾಗಿದೆ.ಕೋವಿಡ್ 19 ಸಾಂಕ್ರಮಿಕ ರೋಗ ನಗರದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಸೋಂಕು ಕಡಿಮೆಯಾಗಿರುವುದರಿಂದ ಮತ್ತೆ ಬೆಂಗಳೂರಲ್ಲಿ ಏರ್ಪಡಿಸಿತ್ತಿರುವ ಅತೀ ದೊಡ್ಡ ಆಭರಣ ಮೇಳ ಕಾರ್ಯಕ್ರಮವಾಗಿದೆ. ದೇಶದ ನೂರಕ್ಕೂ ಹೆಚ್ಚು ಪ್ರಮುಖ ಆಭರಣ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ವಿಶಿಷ್ಟ ಆಭರಣಗಳನ್ನು ಪ್ರದರ್ಶಿಸುತ್ತಿದ್ದಾರೆ.ಈ ವೇಳೆ ಸಮಾರಂಭಕ್ಕೆ ಆಗಮಿಸಿದ ಬಿಜೆಪಿ ಶಾಸಕಿ ಸೌಮ್ಯ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುರಾತನ ಆಭರಣಗಳನ್ನು ತೊಟ್ಟು ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದರು. ಜೊತೆಗೆ ಟ್ರೆಂಡಿ ಜುವೆಲರ್ಸ್‍ಗಳನ್ನು ಜವ್ವನೆಯರು ಧರಿಸಿ ರ್‍ಯಾಂಪ್ ವಾಕ್‌ ಮಾಡುವ ಮೂಲಕ ಪ್ರದರ್ಶಿಸಿದರು. ಅಂದಹಾಗೇ ಈ ಪಾರಂಪರಿಕ, ವೈಶಿಷ್ಟ್ಯಪೂರ್ಣ, ವಿನೂತನ ಆಭರಣ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.Sign in to your account
Username or Email Address


Password

 Remember Me


