ಮಂಗಳೂರು: ದೇಶದಲ್ಲಿ ಈಗ ಚಲಾವಣೆಯಾಗುತ್ತಿರುವ 100 ರೂಪಾಯಿಯ ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆದು ಹೊಸ ಸೀರಿಸ್‍ನ ನೋಟುಗಳನ್ನು ಚಲಾವಣೆಮಾಡುವ ಕಾರ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಈ ವರ್ಷದ ಮಾರ್ಚ್ ನಂತರ ಹಳೆಯ ನೋಟುಗಳು ಜನರಲ್ಲಿ ಚಲಾವಣೆ ಆಗದಿರುವಂತ ಮಹತ್ವದ ಕಾರ್ಯಕ್ಕೆ ಆರ್ ಬಿ ಐ ಕೈಹಾಕಿದೆ.ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣೆ ಸಮಿತಿ ಸಭೆಯಲ್ಲಿ ಆರ್‍ ಬಿ ಐ ಸಹಾಯಕ ಮಹಾಪ್ರಬಂಧಕ ಬಿ.ಎಂ. ಮಹೇಶ್ ಅವರು ಮಾತನಾಡಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಹಳೆಯ ಮುಖಬೆಲೆಯ ನೋಟುಗಳು ಈಗ ಚಲಾವಣೆಯಾಗುತ್ತಿದೆ. ಇದರಲ್ಲಿ ಖೋಟಾನೋಟುಗಳ ಹಾವಳಿ ಹೆಚ್ಚಾಗಿರುವರಿಂದ ಹಳೆಯ ಸೀರಿಸ್‍ನ ನೋಟುಗಳನ್ನು ಸ್ಥಗಿತಕ್ಕೆ ಆರ್ ಬಿ ಐ ಚಿಂತಿಸಿದೆ. ಈ ಮೂಲಕ ಹೊಸ ಸೀರಿಸ್ ನೋಟುಗಳಿಗೆ ಮಣೆಹಾಕಲು ಹೊರಟಿದ್ದೇವೆ. ಹೀಗಾಗಿ ಕಳೆದ 6 ವರ್ಷಗಳಿಂದ ಹಳೆಯ ನೋಟುಗಳನ್ನು ಮುದ್ರಣ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಳೆಯ ನೋಟುಗಳನ್ನು ಹಿಂಪಡೆದು, ಮಾರ್ಚ್ ಅಂತ್ಯಕ್ಕೆ ಪೂರ್ಣಪ್ರಮಾಣದಲ್ಲಿ ಹಳೆಯ ನೋಟುಗಳ ಚಲಾವಣೆ ಆಗದಂತೆ ನೋಡಿಕೊಳ್ಳುವ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದು ಮಹೇಶ್ ಮಾಹಿತಿ ನೀಡಿದರು.ಇದು ನೋಟ್ ಬ್ಯಾನ್ ಅಲ್ಲ. ಕೂಡಲೇ ಜಾರಿಗೆ ತಂದು ಸ್ಥಗಿತಗೊಳಿಸುತ್ತೇವೆ ಎಂಬ ಭಯ ಬೇಡ. ಜನರಿಗೆ ಹೊಸ ಸ್ವಚ್ಛವಾದ ನೋಟಗಳು ಕೈಗೆ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.10 ರೂಪಾಯಿಯ ನಾಣ್ಯ ಸರಿಯಾಗಿ ಚಲಾವಣೆಯಾಗುತ್ತಿಲ್ಲ ಎಂದು ಆರ್‍ಬಿಐ ಗಮನಕ್ಕೆ ಬಂದಿದ್ದು ಈ ನಾಣ್ಯಗಳನ್ನು ಸರಿಯಾಗಿ ಚಲಾವಣೆ ಗೊಳಿಸುವ ಉಪಾಯವನ್ನು ಹುಡುಕುವಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ. 10 ರೂಪಾಯಿ ನೋಟಾದರೂ ನಕಲು ಮಾಡಿ ಚಲಾವಣೆ ಮಾಡಬಹುದು. ಆದರೆ 10 ರೂಪಾಯಿ ನಾಣ್ಯ ಯಾವತ್ತು ನಕಲಿಯಾಗಲು ಸಾಧ್ಯವಿಲ್ಲ. ಇನ್ನು ಮುಂದೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಈ ನಾಣ್ಯ ಸ್ವೀಕರಿಸಿ ಚಲಾವಣೆಗೆ ಬರುವಂತೆ ಮಾಡಬೇಕು ಎಂದು ತಿಳಿಸಿದರು.






 Advertisement 




Sign in to your account
Username or Email Address


Password

 Remember Me


