ಮಂಗಳೂರು: ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವತಿ ಕಾಮುಕನಿಗೆ ಪೊಲೀಸ್ ಕಮಿಷನರ್ ಮುಂದೆಯೇ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಜನವರಿ 14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಬಸ್ಸಿನಲ್ಲಿ ಯುವತಿಗೆ ಕಾಮುಕ ದೈಹಿಕ ಕಿರುಕುಳ ನೀಡಿದ್ದ. ಈ ಸಂಬಂಧ ಆರೋಪಿ ಕಾಸರಗೋಡು ನಿವಾಸಿ ಹುಸೇನ್ (41)ನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಇಂದು ಮಂಗಳೂರು ಕಮೀಷನರ್ ಎನ್ ಶಶಿಕುಮಾರ್ ಅವರು ಆರೋಪಿ ಹಾಗೂ ಸಂತ್ರಸ್ತೆಯ ಜೊತೆ ಸುದ್ದಿಗೋಷ್ಠಿ ನಡೆಸಿದ್ದರು. ಪ್ರೆಸ್ ಮೀಟ್ ಬಳಿಕ ಯುವತಿ, ಕಮಿಷನರ್ ಮುಂದೆಯೇ ಕಾಮುಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.ಕಾಮುಕನ ನೀಚ ಕೃತ್ಯವನ್ನು ಯುವತಿ ಇನ್ ಸ್ಟಾ ಮೂಲಕ ಬಯಲು ಮಾಡಿದ್ದಳು. ಈ ಹಿನ್ನೆಲೆಯಲ್ಲಿ ದಿಟ್ಟತನ ಮೆರೆದ ಯುವತಿಯನ್ನು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಶಶಿಕುಮಾರ್ ಸನ್ಮಾನಿಸಿದರು.ಏನಿದು ಪ್ರಕರಣ..?:
ಜನವರಿ 14 ರಂದು ಯುವತಿ ದೇರಳಕಟ್ಟೆಯಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಯುವತಿ ಕುಳಿತಿದ್ದ ಸೀಟ್ ನಲ್ಲಿ ಕಾಮುಕ ಬಂದು ಕುಳಿತಿದ್ದಾನೆ. ಬಳಿಕ ಆತ ಯುವತಿಗೆ ದೈಹಿಕ ಕಿರುಕುಳ ನೀಡಿದ್ದಾನೆ. ತನಗಾಗುತ್ತಿರುವ ಕಿರುಕುಳದಿಂದ ಬೇಸತ್ತ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಕಾಮುಕ ಬಸ್ಸಿನಿಂದ ಇಳಿದು ಹೋಗಿದ್ದಾನೆ. ಅಲ್ಲದೆ ಮತ್ತೊಂದು ಬಸ್ಸಿನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪಕ್ಕದಲ್ಲಿ ಕುಳಿತು ಮತ್ತೆ ಕಿರುಕುಳ ನೀಡಿದ್ದಾನೆ.ಈ ವೇಳೆ ಯುವತಿ, ಕಾಮುಕನ ಫೋಟೋ ತೆಗೆದು ವೈರಲ್ ಮಾಡೋದಾಗಿ ಎಚ್ಚರಿಸಿದ್ದಳು. ಯುವತಿ ಫೋಟೋ ತೆಗೆಯುತ್ತಿದ್ದಂತೆಯೇ ಕಾಮುಕ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದ. ಈ ಮೂಲಕ ಮತ್ತೆ ಅನುಚಿತ ವರ್ತನೆ ತೋರಿದ್ದ. ಜನರ ಎದುರೇ ಕಾಮುಕ ಹುಸೈನ್ ಕಿರುಕುಳ ನೀಡಿದರೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಮಾತ್ರ ಸುಮ್ಮನಿದ್ದರು. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಡ್ರೈವರ್ ಮತ್ತು ನಿರ್ವಾಹಕನಿಗೆ ಪೊಲೀಸರು ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸಿದರು.ಇತ್ತ ಕಾಮುಕನಿಗೆ ಬುದ್ಧಿ ಕಲಿಸುವ ಸಲುವಾಗಿ ಯುವತಿ, ಕಾಮುಕನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ವಿವರ ಸಹಿತ ಹಾಕಿದ್ದಳು. ಯುವತಿಯ ಪೋಸ್ಟ್ ಆಧಾರದಲ್ಲಿ ಪೊಲೀಸರು ನಿನ್ನೆ ಕಾಮುಕ ಹುಸೈನನ್ನು ಬಂಧಿಸಿದ್ದಾರೆ. ಅಲ್ಲದೆ ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದರು.






 Advertisement 




Sign in to your account
Username or Email Address


Password

 Remember Me


