ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳಿಂದ 200 ಕೋಟಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಿದೆ.2020-21 ನೇ ಸಾಲಿನಲ್ಲಿ ಭವಿಷ್ಯ ನಿಧಿ ನ್ಯಾಸ ಮಂಡಳಿಯ ಬಾಕಿ ಮೊತ್ತ ಪಾವತಿಸಲು 200 ರೂ. ಕೋಟಿ ದೀರ್ಘಾವದಿ ಸಾಲವನ್ನು, 7 ವರ್ಷಗಳ ಅವಧಿಗೆ ಸಂಸ್ಥೆ ಪಡೆಯಲಿದೆ. ಆಸಕ್ತಿ ಹೊಂದಿದ ಬ್ಯಾಂಕ್, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳು ಮುಚ್ಚಿದ ಲಕೋಟಿಯಲ್ಲಿ ಅರ್ಜಿಯನ್ನು ಫೆಬ್ರವರಿ 19ರ ಮಧ್ಯಾಹ್ನ 3 ಗಂಟೆಯೊಳಗೆ ಗೋಕಲ ರಸ್ತೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಗೋಕುಲ ರೋಡ್ ನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲೆಕ್ಕ ಪತ್ರ ಇಲಾಖೆಯವರಿಗೆ ಸಲ್ಲಿಸಬೇಕು. ಅದೇ ದಿನ 4 ಗಂಟೆಗೆ ಲಕೋಟೆಯನ್ನು ತೆರೆಯಲಾಗುವುದು.ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ www.nwksrtc.in ಹಾಗೂ ಮೊಬೈಲ್ ಸಂಖ್ಯೆ 77609 91527, 77609 91512 ಸಂಪರ್ಕಿಸಬಹುದು ಎಂದು ಮುಖ್ಯ ಲೆಕ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


