ಕಲಬುರಗಿ: ನಕಲಿ ಬಿಲ್‍ಗಳಿಗೆ ಅಧಿಕಾರಿ ಸಹಿ ಮಾಡದ ಹಿನ್ನೆಲೆ ಚಿಂಚೋಳಿ ತಾಲೂಕಿನ ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಪುರಸಭೆಯ ಸದಸ್ಯ ಆನಂದ್, ಪುರಸಭೆ ಕಚೇರಿ ಆವರಣದಲ್ಲಿಯೇ ಹಲ್ಲೆ ಮಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.ಚಿಂಚೋಳಿ ತಾಲೂಕಿನಲ್ಲಿ ಪುರಸಭೆ ಮುಖ್ಯಾಧಿಕಾರಿಯಾಗಿ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಅಭಯ್, ನಕಲಿ ಬಿಲ್ ಗಳಿಗೂ ಸಹ ಕಡಿವಾಣ ಹಾಕಿದ್ದಾರೆ. ಇದು ಅಲ್ಲಿನ ಕೆಲ ಪುರಸಭೆ ಸದಸ್ಯರಿಗೆ ಇದೀಗ ನುಂಗಲಾಗದ ಬಿಸಿ ತುಪ್ಪವಾಗಿದೆ. ಇದೇ ವೇಳೆ ಚಿಂಚೋಳಿ ಪುರಸಭೆಯ ಆರ್ ಪಿಐ ಪಕ್ಷದ ಪುರಸಭೆ ಸದಸ್ಯನಾದ ಆನಂದ್ ಟೈಗರ್ ಮಂಗಳವಾರ ಸಂಜೆ ತನ್ನ ಸ್ನೇಹಿತ ಶಶಿಕುಮಾರ್ ಜೊತೆ ಪುರಸಭೆಗೆ ಹೋಗಿದ್ದಾನೆ. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಅಭಯ್ ಹಾಗೂ ಆನಂದ್ ನಡುವೆ ಬಿಲ್ ಮಾಡುವ ಕುರಿತು ಮಾತಿನ ಚಕಮಕಿ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಆನಂದ ನನ್ನ ಬಿಲ್‍ಗೆ ಸಹಿ ಮಾಡಲು ನೀಕಾರಿಸುತ್ತಿಯಾ ಎಂದು ಅಧಿಕಾರಿಗೆ ವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.ಈ ಪುರಸಭೆ ಸದಸ್ಯನ ಗೂಂಡಾಗಿರಿಯ ದೃಶ್ಯ ಪುರಸಭೆ ಆವರಣದಲ್ಲಿ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುರಸಭೆ ಸದಸ್ಯನ ಗೂಂಡಾಗಿರಿ ವಿರುದ್ಧ ಅಧಿಕಾರಿ ಅಭಯ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


