ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡು ಗುಂಪುಗಳ ನಡುವೆ ಡಿಶುಂ ಡಿಶುಂ ನಡೆದಿದೆ. ಯುವಕರ ಗ್ಯಾಂಗ್ ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಂಡಿದ್ದು, ಈ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾಝಿನ್ಸ್ ಎಂಬ ಹುಕ್ಕಾ ಬಾರ್ ಬಳಿ ನಡೆದಿದೆ. ದೊಮ್ಮಸಂದ್ರ ಹುಡುಗರು ಹಾಗು ಎಂ ಎಸ್ ರಾಮಯ್ಯ ಲೇಔಟ್ ಹುಡುಗರ ನಡುವೆ ಈ ಗಲಾಟೆ ನಡೆದಿದೆ. ಗುಂಪು ಘರ್ಷಣೆಯಲ್ಲಿ ಯುವತಿಯೊಬ್ಬಳು ಸಿಲುಕಿ ಹೈರಾಣಾಗಿದ್ದಾಳೆ. ಗೆಳೆಯನ ಜೊತೆ ಬಂದು ಗಲಾಟೆಯಲ್ಲಿ ಸಿಲುಕಿ ಫಜೀತಿಗೆ ಸಿಲುಕಿದ್ದಾಳೆ.ಕಾಝಿನ್ಸ್ ಹುಕ್ಕಾ ಬಾರ್ ಗೆ ಎರಡು ಗುಂಪು ತೆರಳಿತ್ತು. ಬಳಿಕ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದೆ. ನಂತರ ಎರಡು ಗುಂಪು ಕೂಡ ಹುಕ್ಕಾ ಬಾರ್ ನಿಂದ ಹೊರಬಂದಿವೆ. ಸುಮಾರು ಇಪ್ಪತ್ತು ಯುವಕರಿರೋ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಯುವಕರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಯುವಕರ ಗ್ಯಾಂಗ್ ಹೊಡೆದಾಡಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.Sign in to your account
Username or Email Address


Password

 Remember Me


