ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜ.22 ರಂದು ಶಾಂತಿಯುತ ಬೆಂಗಳೂರು ಬಂದ್‌ಗೆ ಕರೆ ನೀಡಿವೆ.ಈ ಬಂದ್‌ಗೆ 22 ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬಂದ್ ಬಗ್ಗೆ ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟಗಳ ಸಮನ್ವಯಕಾರ ಮಸೂದ್ ಅಬ್ದುಲ್ ಖಾದರ್ ಪ್ರತಿಕ್ರಿಯಿಸಿ, ಈ ಬಂದ್ ಶಾಂತಿಯುತವಾಗಿ ಇರಲಿದೆ. ಯಾವುದೇ ರೀತಿ ಗುಂಪು ಮಾಡಿ ಪ್ರತಿಭಟನೆ ಇರುವುದಿಲ್ಲ. ‌ ಸ್ವಯಂಪ್ರೇರಿತವಾಗಿ ಬೆಂಗಳೂರಿನಲ್ಲಿ ಇರುವ ಮುಸ್ಲಿಮರು ಶುಕ್ರವಾರ ಉದ್ಯಮಗಳನ್ನು ಬಂದ್‌ ಮಾಡಿ ಮನೆಯಲ್ಲಿರಬೇಕು. ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೂ ಮುಸ್ಲಿಮರ ಎಲ್ಲಾ ಅಂಗಡಿಗಳು ಬಂದ್‌ ಆಗಲಿದೆ ಎಂದು ತಿಳಿಸಿದರು.ಬೇಡಿಕೆಗಳು ಏನು?
– ದೇವರಜೀವನಹಳ್ಳಿ(ಡಿಜೆಹಳ್ಳಿ) ಮತ್ತು ಕಾಡುಗೊಂಡನ ಹಳ್ಳಿ(ಕೆಜಿ ಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ಬಂಧನಕ್ಕೆ ಒಳಗಾಗಿರುವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು.– ಲವ್ ಜಿಹಾದ್ ವಿರುದ್ಧ ಮತ್ತು ಕೃಷಿ ವಿರೋಧಿ‌ ಕಾಯ್ದೆಗಳನ್ನು ರದ್ದುಗೊಳಿಸಬೇಕು.– ಈಗಾಗಲೇ ಕೆಜೆಹಳ್ಳಿ ಮತ್ತು ಡಿಜೆಹಳ್ಳಿ ಕೇಸ್ ಸಂಬಂಧ ಎಸ್‌ಡಿಪಿಐ ಮುಖಂಡ ಮುಜಾಮ್ಮಿಲ್ ಪಾಷಾ ಸೇರಿದಂತೆ 421 ಜನರನ್ನ ಬಂಧಿಸಲಾಗಿದ್ದು ಬಿಡುಗಡೆ ಮಾಡುವಂತೆ ಒತ್ತಾಯ.– ಗೋ ಹತ್ಯೆ ಕಾಯ್ದೆಯನ್ನು ವಾಪಸ್‌ ಪಡೆಯಬೇಕು.Sign in to your account
Username or Email Address


Password

 Remember Me


