ಹುಬ್ಬಳ್ಳಿ: ವಿದ್ಯುತ್ ಅವಘಡದಿಂದಾಗಿ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಮನೆಯಲ್ಲಿ ಲಕ್ಷಾಂತರ ರೂಪಾಯಿ ನೋಟುಗಳು ಸುಟ್ಟು ಕರಕಲಾಗಿವೆ.ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಕಲ್ಲಪ್ಪ ಈಶ್ವರಪ್ಪ ವಾಲಿ ಹಾಗೂ ಶಿವಬಸಪ್ಪ ವಾಲಿ ಅವರ ಮನೆಗೆ ವಿದ್ಯುತ್ ಅವಘಡದಿಂದ ಬೆಂಕಿ ತಾಗಿದೆ. ಮನೆಯಲ್ಲಿದ್ದ ಖಜಾನೆಗೂ ಬೆಂಕಿ ಹೊತ್ತಿಕೊಂಡಿದೆ.ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಬ್ಯಾಂಕಿನಿಂದ ತಂದಿಟ್ಟ 100, 200 ಹಾಗೂ 500 ಮುಖ ಬೆಲೆಯ ಲಕ್ಷಾಂತರ ರೂಪಾಯಿ ಸುಟ್ಟು ಕರಕಲಾಗಿವೆ. ಜೀವನಕ್ಕೆ ಅವಶ್ಯವಿದ್ದ ಮನೆಯೂ ನೋಟಿನೊಂದಿಗೆ ಸುಟ್ಟು ಹೋಗಿದ್ದು, ಕಾಯಬೇಕಾದ ದೇವರು ಕೂಡ ಸುಟ್ಟು ಕರಕಲಾದ ಘಟನೆ ನಡೆದಿದೆ.ಘಟನೆಯ ಕುರಿತು ಹುಬ್ಬಳ್ಳಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


