ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಕೊಲೆ ಆರೋಪಿ ಪ್ರವೀಣ್ ಮೇಲೆ ಗುಂಡಿನ ದಾಳಿ ನಡೆದಿರೋ ಘಟನೆ ಪೀಣ್ಯಾದ ತಿಪ್ಪೇನಹಳ್ಳಿಯಲ್ಲಿ ನಡೆದಿದೆ.ಇಂದು ಬೆಳಗ್ಗಿನ ಜಾವ ಪೀಣ್ಯ ಪೊಲೀಸರು ಕೊಲೆ ಆರೋಪಿ ಪ್ರವೀಣ್ ನನ್ನ ಬಂಧಿಸಲು ಹೋಗಿದ್ದಾರೆ. ಈ ವೇಳೆ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪೊಲೀಸರಿಗೆ ಶರಣಾಗದೇ ಹೈಡ್ರಾಮಾ ನಡೆಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.ಆರೋಪಿಯನ್ನ ವಶಕ್ಕೆ ಪಡೆಯಲು ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದರು. ಆದರೆ ಆರೋಪಿ ಪ್ರವೀಣ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪೇದೆ ರಂಗಸ್ವಾಮಿಯ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಪ್ರವೀಣ್ ಮೇಲೆ ಪೀಣ್ಯ ಪಿಎಸ್‍ಐ ಮಾಯಪ್ಪ ಬಿರಾಣಿ ಶೂಟೌಟ್ ನಡೆಸಿದ್ದಾರೆ.ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 Advertisement 




Sign in to your account
Username or Email Address


Password

 Remember Me


