ನೆಲಮಂಗಲ: ಜನವರಿ 21ನ್ನು ದಾಸೋಹ ದಿನವೆಂದು ಘೋಷಿಸಿರಿ ಎಂದು ರಾಜ್ಯ ಸರ್ಕಾರಕ್ಕೆ ನೆಲಮಂಗಲ ತಾಲೂಕಿನ ಹೊನ್ನಮ್ಮಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.ಕರ್ನಾಟಕ ರತ್ನ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶಿವೈಕ್ಯ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿ ಜನವರಿ 21ಕ್ಕೆ 2 ವರ್ಷ ತುಂಬುತ್ತದೆ. ಹೀಗಾಗಿ ಈ ದಿನವನ್ನು ದಾಸೋಹ ದಿನವೆಂದು ಘೋಷಿಸಿರಿ ಎಂದು ಮುಖ್ಯಮಂತ್ರಿ. ಬಿ.ಎಸ್ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.ಸಿದ್ದಗಂಗಾ ಶ್ರೀಗಳು 21 ನೇ ಶತಮಾನದ ತ್ರಿವಿಧ ದಾಸೋಹದ ಹರಿಕಾರರು ಎಂದು ಬಣ್ಣಿಸಿರುವ ಹೊನ್ನಮ್ಮ ಗವಿಮಠ ಶ್ರೀಗಳು, ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದಾಗ ಅಂದು 36 ಗಂಟೆಯಲ್ಲಿ 40 ಲಕ್ಷ ಜನ ಅನ್ನ ದಾಸೋಹ ಸ್ವೀಕರಿಸಿದ್ದರು. ಆದ್ದರಿಂದ ಜನವರಿ 21ನ್ನು ದಾಸೋಹ ದಿನವೆಂದು ಘೋಷಿಸಲು ಮನವಿ ಮಾಡಿದ್ದಾರೆ. Sign in to your account
Username or Email Address


Password

 Remember Me


