ನೆಲಮಂಗಲ: ವರದಕ್ಷಿಣೆ ಆರೋಪ ಹಿನ್ನಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬಿಟ್ಟಸಂದ್ರ ಗ್ರಾಮದಲ್ಲಿ ನಡೆದಿದೆ.ವರದಕ್ಷಿಣೆ ಆರೋಪದಲ್ಲಿ ಹಲ್ಲೆಗೊಳಗಾದ ಯುವಕನನ್ನು ಪರಮೇಶ್ (28) ಎಂದು ಗುರುತಿಸಲಾಗಿದೆ. ಬಾಮೈದನ ಮೇಲೆ ಇಬ್ಬರು ಅಕ್ಕಂದಿರ ಪತಿಯರು ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬಿಟ್ಟಸಂದ್ರ ಗ್ರಾಮದಲ್ಲಿ ಯುವಕನಿದ್ದ ಸ್ಥಳಕ್ಕೆ ಕಾರಿನಲ್ಲಿ ಬಂದಿದ್ದ ಐವರು ಯುವಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡೊರುವ ಪರಮೇಶ್ ತೀವ್ರ ರಕ್ತಸ್ರಾವದಿಂದ ಬಳಲುತಿದ್ದು, ಯುವಕ ಪರಮೇಶ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವರದಕ್ಷಿಣೆ ಬೇಡಿಕೆ ವಿಚಾರದಲ್ಲಿ ಬಾಮೈದನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.ಧರಣೇಶ್, ಷಢಾಕ್ಷರಿ, ಮಂಜುನಾಥ್, ಸುರೇಶ್, ನಾಗರಾಜು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಈ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆ ಮಾಡಿದ ಕೆಲ ವೀಡಿಯೋಗಳಿವೆ. ಈ ಮೂಲಕವಾಗಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


