ಗದಗ: ಅಂಗಡಿ ಕಳ್ಳತನ ತಡೆಲು ಬಂದ ಗೂರ್ಖಾ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆಮಾಡಿ ಪರಾರಿಯಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ.ನರಗುಂದ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ತಡರಾತ್ರಿಯಲ್ಲಿ ಗಸ್ತು ತಿರುಗುತ್ತಿದ್ದನು. ಈ ವೇಳೆ ಅಂಗಡಿ ಕಳ್ಳತನ ಮಾಡುತ್ತಿರುವುದು ಗೂರ್ಖಾ ಹರೀಶಸಿಂಗ್ ಸೌಧ್ ಗಮನಕ್ಕೆ ಬಂದಿದೆ. ಈ ಕಳ್ಳತನವನ್ನು ತಡೆಯಲು ಮುಂದಾಗಿದ್ದದ್ದಾನೆ. ಆಗ ದುಷ್ಕರ್ಮಿಗಳು ಹರೀಶಸಿಂಗ್ ತಲೆ ಹಾಗೂ ಕಣ್ಣಿನ ಭಾಗಕ್ಕೆ ರಾಡ್ ನಿಂದ ಹೊಡೆದು ಗಾಯಗೊಳಿಸಿದ್ದಾರೆ. ದುಷ್ಕರ್ಮಿಗಳು ನಡೆಸಿರುವ ಹಲ್ಲೆಯಿಂದಾಗಿ ರಕ್ತದ ಮಡುವಿನಲ್ಲಿ ಗೂರ್ಖಾ ನರಳಾಡಿದ್ದಾನೆ.ಗೂರ್ಖಾನ ನರಳಾಟವನ್ನು ಗಮನಿಸಿದವರು ಆತನನ್ನು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಿಂಧ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಗಾಯಾಳು ಗೂರ್ಖಾನಿಂದ ಇನ್ನಷ್ಟು ಮಾಹಿತಿ ಕಲೆ ಹಾಕಿದ್ದಾರೆ. ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


