ಬೆಂಗಳೂರು: ಪತ್ನಿಯ ನಗ್ನ ಫೋಟೋ ಹಾಗೂ ವಿಡಿಯೋವನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಬೇರೆಯವರಿಗೆ ಕಳುಹಿಸುತ್ತೇನೆ ಎಂದು ಪೀಡಿಸುತ್ತಿದ್ದ ಪತಿಯ ವಿರುದ್ಧ ದೂರು ದಾಖಲಿಸಿರೋ ಘಟನೆ ಬೆಂಗಳೂರು ಪ್ರೇಜರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ಎರಡು ವರ್ಷದ ಹಿಂದೆ ಪತಿ ರಾಜು ಎಂಬಾತನನ್ನ ಲಕ್ಷ್ಮಿ (ಹೆಸರು ಬದಲಾಯಿಸಲಾಗಿದೆ) ಮದುವೆಯಾಗಿದ್ದರು. ಈ ಮೊದಲೇ ಮೂರು ಮದುವೆಯಾಗಿದ್ದ ರಾಜು ಸುಳ್ಳು ಹೇಳಿ ಲಕ್ಷ್ಮಿಯನ್ನ ಮದುವೆಯಾಗಿದ್ದನು. ಬಲವಂತವಾಗಿ ಹೆದರಿಸಿ ಪತ್ನಿಯ ಖಾಸಗಿ ಫೋಟೋಗಳನ್ನ ಕ್ಲಿಕ್ಕಿಸಿಕೊಂಡ ರಾಜು ಬೇರೆಯವರಿಗೆ ಕಳುಹಿಸುತ್ತೇನೆಂದು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಪತಿ ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತ ಲಕ್ಷ್ಮಿ ಪ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮದ್ಯ ತರಲು ಕರೆದುಕೊಂಡು ಹೋಗ್ತಾನೆ. ಪ್ರತಿನಿತ್ಯ ಕುಡಿದು ಬಂದು ಸಿಗರೇಟ್ ನಿಂದ ಸುಟ್ಟು ದೈಹಿಕವಾಗಿ ಹಿಂಸೆ ಮಾಡುತ್ತಾನೆ. ನನ್ನ ಪುರುಷ ಸಹದ್ಯೋಗಿಗಳಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾನೆ. ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಹಲ್ಲೆ ಮಾಡುತ್ತಾನೆ ಎಂದು ಲಕ್ಷ್ಮಿ ದೂರಿನಲ್ಲಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಾಜು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


