ಮಂಡ್ಯ: ಕುಡಿದ ಮತ್ತಿನಲ್ಲಿ ಮಗ ತಂದೆಯನ್ನು ಕೊಂದಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.
ಮಗನಿಂದ ಹತ್ಯೆಯಾದ ತಂದೆ ಸಣ್ಣಮರೀಗೌಡ (68) ಎಂದು ಗುರುತಿಸಲಾಗಿದೆ. ತಂದೆಯನ್ನು ಕೊಲೆ ಮಾಡಿರುವ ಪಾಪಿ ಮಗ ಸಿಂಗ್ರೀಗೌಡ(40) ಆಗಿದ್ದಾನೆ.ಮಗ ಸಿಂಗ್ರೀಗೌಡ ಕಂಟ ಪೂರ್ತಿಯಾಗಿ ಕುಡಿದು ಬಂದಿದ್ದಾನೆ. ಈ ವೇಳೆ ಅವನಿಗೆ ನಶೆಯಲ್ಲಿ ಏನು ಮಾಡುತ್ತಿದ್ದೇನೆ ಎಂಬುದು ಅವನ ಅರಿವಿಗೆ ಬಾರದಂತೆ ಆಗಿದೆ. ಕುಡಿದಿರುವ ನಶೆಯಲ್ಲಿ ತನ್ನ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಜೋರಾಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ತಂದೆಯ ತಲೆಯನ್ನು ಗೋಡೆಗೆ ಜಜ್ಜಿದ್ದಾನೆ. ತೀವ್ರ ರಕ್ತ ಸಾವ್ರವವಾಗಿ ತಂದೆ ಸಾವನ್ನಪ್ಪಿದ್ದಾನೆ. ಈ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


 Advertisement 







 Advertisement 




Sign in to your account
Username or Email Address


Password

 Remember Me


