ಬೆಳಗಾವಿ: ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಸ್ವಾಗತಿಸಲು ಬಿಜೆಪಿ ಮಹಿಳಾ ನಾಯಕಿಯರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.ಒಂದೆಡೆ ಅಮಿತ್ ಶಾ ಬೆಳಗಾವಿ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ನಾಯಕಿಯರಾದ ಡಾ.ಸೋನಾಲಿ ಸೋರ್ನಾಬತ್, ದೀಪಾ ಕುಡಚಿ ನಾ ಮುಂದು ತಾ ಮುಂದು ಎಂದು ಜಟಾಪಟಿ ನಡೆಸಿದ್ದರು.ಸಾಂಬ್ರಾ ಏರ್‍ಪೋರ್ಟ್ ಗೆ ಬಂದ ಅಮಿತ್ ಶಾರನ್ನು ಸ್ವಾಗತ ಕೋರಲು ಡಾ.ಸೋನಾಲಿ ಸೋರ್ನಾಬತ್ ಏರ್‍ಪೋರ್ಟ್ ಒಳಗೆ ಹೋಗಿದ್ದಾರೆ. ಇದಕ್ಕೆ ಮಹಿಳಾ ನಾಯಕಿ ದೀಪಾ ಕುಡಚಿ ಪಾಸ್ ಇಲ್ಲದೇ ಒಳಗೆ ಹೇಗೆ ಬಿಟ್ರಿ, ಸ್ವಾಗತ ಸಮಿತಿ ಲಿಸ್ಟ್‍ನಲ್ಲಿ ಅವರ ಹೆಸರಿಲ್ಲ ಎಂದು ತಗಾದೆ ತೆಗೆದಿದ್ದರು.ಈ ಕುರಿತಂತೆ ಬಿಜೆಪಿ ನಾಯಕರ ಬಳಿ ದೀಪಾ ಕುಡಚಿ ಪಾಸ್ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಬಿಜೆಪಿಯ ಅಲ್ಲಿನ ಸ್ಥಳೀಯ ನಾಯಕರಾದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಮಹೇಶ್ ಕುಮಟ್ಟಳ್ಳಿ ಹೂಗುಚ್ಛ ನೀಡಿ ಸ್ವಾಗತಿಸಿದರು.






 Advertisement 




Sign in to your account
Username or Email Address


Password

 Remember Me


