ತುಮಕೂರು: ಕಾನೂನು ಸಚಿವ ಮಾಧುಸ್ವಾಮಿ ನೀರು ಕೇಳಿದ ರೈತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಪಂ ಚುನಾವಣೆ ಪೂರ್ವದ ವಿಡಿಯೋ ಈಗ ಎಲ್ಲಡೆ ಸದ್ದು ಮಾಡುತ್ತಿದೆ.ಮತದಾನದ ಹಕ್ಕನ್ನು ಹಾಳು ಮಾಡಬೇಡಿ. ನೀರನ್ನು ಬಿಡ್ಸಯ್ಯ ಎಂದು ಯಾರ ಕೈಲಿ ನೀರು ಬಿಡಿಸುತ್ತಿರಾ ನಾನು ನೋಡುತ್ತೇನೆ. ಯಾರಾದ್ರೂ ಬಂದು ನನ್ನ ಬಳಿ ಕೇಳಿದ್ದೀರಾ. ಇಲ್ಲೊಬ್ಬ ಎಂಎಲ್ ಎ ಇದಾನೆ ಅಂತ ಕೇಳಿದಿರೇನ್ರಿ. ಒಂದು ಮಾತನ್ನು ನೀವು ಹೇಳಿಲ್ಲ. ನೀರಿನ ಸಮಸ್ಯೆಯನ್ನು ನೀವು ನಮ್ಮ ಬಳಿ ಹೇಳಿಯೂ ನಾವು ಕೆಲಸ ಮಾಡದೇ ಇದ್ದಾಗ ಸ್ಟ್ರೈಕ್ ಮಾಡೋದು ಒಂದು ಗೌರವವಾಗಿದೆ. ನೀವು ಅರ್ಜಿ ಕೊಟ್ಟು ಕೇಳಿದಾಗಲೂ ನಾವು ಇಲ್ಲ ಅಂದಾಗ ನೀವು ಹೇಳಬೇಕು. ಚುನಾವಣೆ ಬೈಕಾಟ್ ಮಾಡೋವಂತದ್ದೇನು ಇತ್ತು. ಚುನಾವಣಾ ಬೈಕಾಟ್ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಅವಾಜ್ ಹಾಕಿದ್ದಾರೆ.ಸಚಿವರು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ತೂಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂಜಿನಿಯರಿಂಗ್ ವಿಭಾಗದಲ್ಲಿ ಯಾವುದೇ ಕೆಲಸಗಳು ಸರಿಯಾದ ರೀತಿಯಲ್ಲಿ ಆಗಿಲ್ಲವೇಂದು ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಲ್ಲಿ ಬೈದು ಸುದ್ದಿಯಾಗಿದ್ದರು. ಈಗಲೂ ಇಂತಹದ್ದೆ ವಿಚಾರವಾಗಿ ಸುದ್ದಿಯಾಗಿದ್ದಾರೆ.






 Advertisement 




Sign in to your account
Username or Email Address


Password

 Remember Me


