ಚಾಮರಾಜನಗರ: ವೃದ್ಧೆಯೊಬ್ಬರನ್ನು ಕೊಲೆಗೈದು ಬಳಿಕ ಕಾಲಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದಿರುವ ಘಟನೆಯೊಂದು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.ಶಿವಮ್ಮ ಕೊಲೆಯಾದ ದುರ್ದೈವಿ. ಸಾಲ ವಾಪಸ್ ಕೇಳಿದ್ದಕ್ಕೆ ಈಕೆಯನ್ನು ಕೊಲೆ ಮಾಡಲಾಗಿದೆ. ಆರೋಪಿಗಳನ್ನು ನಂಜ ಮಣಿ ಮಗ ಶಿವು (19) ಹಾಗೂ ಸ್ನೇಹಿತ ರಾಜು (18) ಎಂದು ಶಂಕಿಸಲಾಗಿದೆ.ಶಿವಮ್ಮ ಪಕ್ಕದ ಮನೆಯ ನಂಜಮಣಿ ಎಂಬ ಮಹಿಳೆಗೆ ಸಾಲ ಕೊಟ್ಟಿದ್ದರು. ಈ ಸಾಲವನ್ನು ವಾಪಸ್ ಮಾಡುವಂತೆ ಶಿವಮ್ಮ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಲ ಪಡೆದಿದ್ದ ನಂಜಮಣಿ ಮಗ ಶಿವು ಹಾಗೂ ಸ್ನೇಹಿತ ರಾಜು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಕೊಲೆಯ ಬಳಿಕ ಆರೋಪಿಗಳು ಪಾರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


