ನೂತನ ಆಲ್ಬಂ ಸಾಂಗ್ ‘ಯಾರೋ ನೀನು’ ಡೈಲಾಗ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಕೈಯಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಸುವ ಮೂಲಕ ‘ಯಾರೋ ನೀನು’ ಆಲ್ಬಂ ಸಾಂಗ್ ಗಮನ ಸೆಳೆಯುತ್ತಿದೆ. ಡೈಲಾಗ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಇಡೀ ತಂಡಕ್ಕೆ ವೀರೇಂದ್ರ ಹೆಗ್ಡೆ ಅವರು ಶುಭ ಹಾರೈಸಿದ್ದಾರೆ.‘ಯಾರೋ ನೀನು’ ಯುವ ಪ್ರತಿಭೆಗಳೆಲ್ಲ ಒಟ್ಟಿಗೆ ಸೇರಿ ಮಾಡಿರುವ ಹೊಸತನದ ಆಲ್ಬಂ ಸಾಂಗ್ ಆಗಿದೆ. ವಿಭಿನ್ನವಾಗಿ ಮೂಡಿ ಬಂದಿರೋ ಮೋಟಿವೇಶನಲ್ ಆಲ್ಬಂ ಸಾಂಗ್ ಇದಾಗಿದ್ದು, ನವ ಪ್ರತಿಭೆ ವಿನೋದ್ ಕುಮಾರ್ (ಶ್ರೀವಿ) ಇದರಲ್ಲಿ ನಟಿಸಿದ್ದಾರೆ. ಎನ್. ಸಂತೋಷ್ ನಿರ್ದೇಶನ ಹಾಗೂ ಕೊರಿಯೋಗ್ರಫಿಯಲ್ಲಿ ಹಾಡು ಮೂಡಿಬಂದಿದ್ದು, ವೆಂಕಟೇಶ್ ಲೀಲಾವತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಲ್ಬಂ ಸಾಂಗ್ ನಿರ್ಮಾಣವಾಗಿದೆ.ಗಿರೀಶ್ ಸಾಹಿತ್ಯ ಗೀಚಿರುವ ಈ ಹಾಡಿಗೆ ಪವನ್ ಸಂಗೀತ ನಿರ್ದೇಶನ, ಪಂಚಮ್ ಅವರ ಗಾಯನವಿದೆ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಯಲ್ಲಿ ಈ ಹಾಡು ಬಿಡುಗಡೆಯಾಗುತ್ತಿದ್ದು, ಇದೇ ತಿಂಗಳ ಕೊನೆಯಲ್ಲಿ ಸ್ಟಾರ್ ನಟನ ಕೈಯಲ್ಲಿ ಆಲ್ಬಂ ಸಾಂಗ್ ರಿಲೀಸ್ ಮಾಡಲು ‘ಯಾರೋ ನೀನು’ ತಂಡ ಪ್ಲಾನ್ ಮಾಡಿಕೊಂಡಿದೆ.Sign in to your account
Username or Email Address


Password

 Remember Me


