ಚಂದನವನಕ್ಕೆ ನಿರ್ದೇಶಕನಾಗಿ ಕಾಲಿಟ್ಟ ರಿಷಬ್ ಶೆಟ್ಟಿ ತಾವೊಬ್ಬ ಪ್ರತಿಭಾವಂತ ನಿರ್ದೇಶಕ ಮಾತ್ರವಲ್ಲ ಅದ್ಭುತ ನಟ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ. ನಾಯಕ ನಟನಾಗಿ ನಟಿಸಿದ ಮೊದಲ ಸಿನಿಮಾ ಬೆಲ್ ಬಾಟಂ ಸೂಪರ್ ಸಕ್ಸಸ್ ಕಂಡ ನಂತರ ಹತ್ತಾರು ಸಿನಿಮಾಗಳು ರಿಷಬ್ ಶೆಟ್ಟಿಯನ್ನರಸಿ ಬರುತ್ತಿವೆ. ಸ್ಯಾಂಡಲ್‍ವುಡ್ ಸಕ್ಸಸ್ ಫುಲ್ ನಟ ಕಂ ನಿರ್ದೇಶಕನಾಗಿ ಖ್ಯಾತಿಗಳಿಸಿರುವ ರಿಷಬ್ ಶೆಟ್ಟಿ `ಹೀರೋ’ ಸಿನಿಮಾ ಮೂಲಕ ನಟನಾಗಿ ಮತ್ತೊಮ್ಮೆ ಅಭಿಮಾನಿ ಬಳಗವನ್ನು ರಂಜಿಸಲು ಬಂದಿದ್ದಾರೆ.ಭರತ್ ರಾಜ್ ಆಕ್ಷನ್ ಕಟ್ ಹೇಳಿರುವ ಹೀರೋ ಚಿತ್ರದಲ್ಲಿ ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಯಶಸ್ವಿಯಾಗಿ ಚಿತ್ರೀಕರಣಗೊಂಡ ಹೀರೋ ಸಿನಿಮಾ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ. ಬಹು ನಿರೀಕ್ಷಿತ ‘ಹೀರೋ’ ಚಿತ್ರದ ಪ್ರಾಮಿಸಿಂಗ್ ಟ್ರೈಲರ್ ಬಿಡುಗಡೆಯಾಗಿದೆ. ಫಸ್ಟ್ ಲುಕ್, ಟೀಸರ್ ಮೂಲಕ ನಿರೀಕ್ಷೆ ಮೂಡಿಸಿದ ಟ್ರೈಲರ್ ನಿರೀಕ್ಷೆಗೂ ಮೀರಿ ಮೂಡಿ ಬಂದಿದ್ದು ರಿಷಬ್ ಶೆಟ್ಟಿ ಸಿನಿಮಾ ಆಯ್ಕೆ ವಿಚಾರಕ್ಕೆ ಅಭಿಮಾನಿ ಬಳಗ ಫಿಧಾ ಆಗಿದ್ದಾರೆ.ಸಸ್ಪೆನ್ಸ್, ಆಕ್ಷನ್, ಕಾಮಿಡಿ, ಥ್ರಿಲ್ಲರ್, ಲವ್ ಎಲ್ಲಾ ಎಲಿಮೆಂಟ್ ಗಳನ್ನು ಒಳಗೊಂಡ ‘ಹೀರೋ’ ಚಿತ್ರ ಸಿನಿರಸಿಕರಿಗೆ ಹೊಸದೊಂದು ಫೀಲ್ ಕೊಡೋದ್ರಲ್ಲಿ ಡೌಟೇ ಇಲ್ಲ ಎನ್ನುವಂತಿದೆ ಹೀರೋ ಟ್ರೈಲರ್. ಸಂಗೀತ ನಿರ್ದೇಶಕ ಅಜನೀಶ್ ಲೋಕ್‍ನಾಥ್ ಹಿನ್ನೆಲೆ ಸಂಗೀತ ‘ಹೀರೋ’ ಟ್ರೈಲರ್ ಹೈಲೈಟ್ ಆಗಿದ್ದು, ಟ್ರೈಲರ್ ಗೆ ಹೊಸ ಇಮೇಜ್ ನೀಡಿದೆ.‘ಹೀರೋ’ ತಾರಂಗಣದಲ್ಲಿ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಅರವಿಂದ್ .ಎಸ್. ಕಶ್ಯಪ್ ಛಾಯಾಗ್ರಹಣ ಹೀರೋ ಚಿತ್ರಕ್ಕಿದ್ದು, ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸೆನ್ಸಾರ್ ಅಂಗಳದಲ್ಲಿರುವ ಹೀರೋ ಚಿತ್ರವನ್ನು ಮುಂದಿನ ತಿಂಗಳು ಚಿತ್ರಮಂದಿರಕ್ಕೆ ತರೋ ಪ್ಲಾನ್ ಹಾಕಿಕೊಂಡಿದೆ ಚಿತ್ರತಂಡ.Sign in to your account
Username or Email Address


Password

 Remember Me


