ಶಿವಮೊಗ್ಗ: ನಾನು ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನನಗೆ ನೀರು ಕುಡಿಸಿದ್ದಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.ನಗರದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಕೋಟಾ ಭಾಷಣ ಮಾಡುತ್ತಿದ್ದರು. ಮಾತನಾಡುವ ವೇಳೆ ಸಚಿವರು ಕೆಮ್ಮುತ್ತಿದ್ದರು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಸಚಿವರಿಗೆ ಕುಡಿಯಲು ನೀರು ಕೊಡಲು ಹೋದರು. ನಾನು ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನೀರು ಕುಡಿಸಿದ್ದಾರೆ ಎಂದು ಸಚಿವರು ಟಾಂಗ್ ನೀಡಿದರು.ಈ ಮಧ್ಯೆ ಎದ್ದು ನಿಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪೂಜಾರಿ ಅವರಿಗೆ ಮುಜರಾಯಿ ಮಾತ್ರ ಇಲ್ಲ ಮೀನುಗಾರಿಕೆನೂ ಇದೆ ಎಂದರು. ಆಗ ಪೂಜಾರಿ ಅಷ್ಟೇ ಅಲ್ಲ ಬಿಡಿ ಅಂದ್ರು. ಅಷ್ಟೇ ಅಲ್ಲ ಇನ್ನು ಇದೆ. ಹೇಳೋಣ ನಿಮ್ಮ ಕಥೆನಾ ಅಂತ ಸಿ.ಟಿ. ರವಿ ಮುಂದುವರಿಸಿದರು.ಆಗ ಪೂಜಾರಿ, ಅಯ್ಯೋ ಬೇಡಪ್ಪಾ ಕಾಂಪ್ರಮೈಸ್ ಮಾಡಿಕೊಳ್ಳೋಣ ಎಂದು ಹೇಳಿ ಕೋಟಾ ಭಾಷಣ ಮುಂದುವರಿಸಿದ ಪ್ರಸಂಗ ನಡೆಯಿತು.






 Advertisement 




Sign in to your account
Username or Email Address


Password

 Remember Me


