ಕೋಲಾರ: ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿಯ ನಿವಾಸದ ಮುಂದೆ ಮಹಿಳೆ ಧರಣಿ ನಡೆಸುತ್ತಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ನಡೆದಿದೆ.ವೀಣಾ ಮತ್ತು ಮಂಜುನಾಥ್ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಅನ್ಯ ಜಾತಿ ಆದ್ರೂ ಪರವಾಗಿಲ್ಲ ನಿನ್ನನ್ನೇ ಮದುವೆ ಆಗ್ತೀನಿ ಅಂತ ಮೂರು ವರ್ಷ ಪ್ರೀತಿಸಿ ಮದುವೆ ಸಹ ಆಗಿದ್ದನು. ಕೊನೆಗೆ ನಮಗೆ ಯಾರು ಬೇಡ ಕೆಲ ದಿನಗಳ ಕಾಲ ದೂರ ಇರೋಣ ಎಂದು ಮೈಸೂರಿನಲ್ಲಿ ಒಂದು ವರ್ಷ ಜೀವನ ಸಾಗಿಸಿದ್ದಾನೆ. ಒಂದು ವರ್ಷ ನಂತರ ಊರಿಗೆ ಬಂದ ಮಂಜುನಾಥ್ ಪತ್ನಿಯನ್ನ ಬಿಟ್ಟು ಪರಾರಿಯಾಗಿದ್ದಾನೆ.ಇದೀಗ ಪತಿ ಬೇಕೆಂದು ಎರಡು ದಿನಗಳಿಂದ ಮದುವೆಯಾಗಿರುವ ಫೋಟೋ ಹಿಡಿದು ಮಂಜುನಾಥ್ ಮನೆ ಮುಂದೆ ವೀಣಾ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಳ ಜಾತಿ ಅನ್ನೋ ಕಾರಣಕ್ಕೆ ನನಗ ಮೋಸವಾಗಿದೆ ಎಂದು ವೀಆಣ ಆರೋಪಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


