ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.ಕೆಜಿಎಫ್ -2 ಟೀಸರ್ ಹಾಗೂ ಪೋಸ್ಟರ್ ನಲ್ಲಿ ಯಶ್ ಸಿಗರೇಟು ಸೇದುವ ದೃಶ್ಯಾವಳಿ ಪ್ರಸಾರ ಮಾಡಿರುವುದರಿಂದ ಇಲಾಖೆ ಈ ನೋಟಿಸ್ ನೀಡಿದೆ.ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಡಾ. ಸುಧಾಕರ್, ನಟ ಯಶ್ ಗೆ ನೋಟಿಸ್ ಅಲ್ಲ ಮನವಿ ಅಷ್ಟೇ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮನವಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.ಬರೀ ಯಶ್ ಗೆ ಮಾತ್ರ ಅಲ್ಲ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಸಾವಿರಾರು ಅಭಿಮಾನಿಗಳು ನಿಮ್ಮನ್ನು ಫಾಲೋ ಮಾಡುತ್ತಾರೆ. ಹಾಗಿರುವಾಗ ಸಿಗರೇಟ್ ಸೇದುವುದನ್ನ ಎಲ್ಲಾ ತೋರಿಸಬಾರದು. ಏಕೆಂದರ್ ಕ್ಯಾನ್ಸರ್ ಪೀಡಿತರು ಜಾಸ್ತಿ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನೆಲ್ಲ ತೋರಿಸಬಾರದು, ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಯೂಟ್ಯೂಬ್ ನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಸಿನಿಮಾದ ಟೀಸರ್ ಗೆ ಎಲ್ಲಾ ಕಡೆಯಿಂದಲೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಈ ಮಧ್ಯೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಶ್ ಗೆ ನೋಟಿಸ್ ಕೊಟ್ಟಿದೆ.ಟೀಸರ್ ನಲ್ಲಿ ಯಶ್ ಸಿಗರೇಟ್ ಹಚ್ಚುವ ದೃಶ್ಯವಿದ್ದು, ಇದಕ್ಕೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘಟನೆಯಾಗಿದೆ. ಹೀಗಾಗಿ ಸಿಗರೇಟ್ ಸೇದುವ ದೃಶ್ಯವನ್ನು ತೆಗೆದುಹಾಕುವಂತೆ ಇಲಾಖೆ ನೋಟಿಸ್ ನಲ್ಲಿ ತಿಳಿಸಿದೆ.Sign in to your account
Username or Email Address


Password

 Remember Me


