ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತಿನ ಮೇಲೆ ನಿಲ್ಲುವ ನಾಯಕ. ಅವರು ಯಾವತ್ತೂ ಕೊಟ್ಟ ಮಾತು ತಪ್ಪಿಲ್ಲ ಎಂದು ಶಾಸಕ, ಸಚಿವ ಸ್ಥಾನದ ಆಕಾಂಕ್ಷಿ ಮುನಿರತ್ನ ಹೇಳಿದ್ದಾರೆ.ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮುನಿರತ್ನ, 9 ಗಂಟೆಗೆ ಬಂದು ಭೇಟಿಯಾಗುವಂತೆ ಸಿಎಂ ಸೂಚಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳನ್ನ ಭೇಟಿಯಾಗಲು ತೆರಳುತ್ತಿದ್ದೇನೆ. ಸಿಎಂ ಖಂಡಿತ ನನಗೆ ಅನ್ಯಾಯ ಮಾಡಲ್ಲ. ಪ್ರತಿ ರಾಜಕಾರಣಿ ಮಾತಾಡ್ತಾರೆ. ಆದ್ರೆ ಯಡಿಯೂರಪ್ಪನವರು ಮಾತಿನ ಮೇಲೆ ನಿಲ್ಲೋ ನಾಯಕ. ಇನ್ನು ಪಟ್ಟಿ ಅಂತಿಮ ಆಗಿಲ್ಲ ಎಂದು ತಿಳಿಸಿದರು.ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರೆಬೆಲ್ ನಾಯಕರಲ್ಲಿ ಶಾಸಕ ಮುನಿರತ್ನ ಸಹ ಒಬ್ಬರು. ಬೆಂಗಳೂರಿನ ಪ್ರಭಾವಿ ನಾಯಕರಾಗಿರುವ ಮುನಿರತ್ನ ವಲಸಿಗರ ಕೋಟಾದಲ್ಲಿ ಸಂಪುಟ ಸೇರ್ಪಡೆಯಾಗೋದು ಬಹುತೇಕ ಖಚಿತವಾಗಿದೆ. ಆರ್.ಆರ್.ನಗರ ಉಪಚುನಾವಣೆಯಲ್ಲಿ ಮತ ಯಾಚನೆ ಮಾಡಿದ್ದ ಸಿಎಂ ಬಾವಿ ಮಂತ್ರಿಗಳಿಗೆ ವೋಟ್ ಹಾಕುವಂತೆ ಮನವಿ ಮಾಡಿಕೊಂಡಿದ್ದರು.Sign in to your account
Username or Email Address


Password

 Remember Me


