ದಾವಣಗೆರೆ: ಪ್ರಜಾಕೀಯ ಪರವಾಗಿ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದೀರಿ. ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು. ಎಲ್ಲಾ ಹಳ್ಳಿಗೂ ನಿಮ್ಮ ಮಾದರಿಯನ್ನು ಸಾರುತ್ತೇನೆ ಎಂದು ಪ್ರಜಾಕೀಯ ಸಂಸ್ಥಾಪಕ, ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.ಪ್ರಜಾಕೀಯ ಬೆಂಬಲಿತ ಅಭ್ಯರ್ಥಿ ಚೇತನ್ ಕುಮಾರ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮಕ್ಕೆ ರಿಯಲ್ ಸ್ಟಾರ್ ಭೇಟಿ ನೀಡಿ ಚೇತನ್ ನನ್ನು ಅಭಿನಂದಿಸಿದ್ದಾರೆ.ಅರೇ ಹಳ್ಳಿಯಲ್ಲಿ ಟ್ರಾಕ್ಟರ್ ಟ್ರೈಲರ್ ಮೇಲೆ ನಿಂತು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ, ಪ್ರಜಾಕೀಯ ಪರವಾಗಿ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದೀರಿ. ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು. ಎಲ್ಲಾ ಹಳ್ಳಿಗೂ ನಿಮ್ಮ ಮಾದರಿಯನ್ನು ಸಾರುತ್ತೇನೆ. ಪ್ರತಿ ಹಳ್ಳಿಗೂ ನೀವೇ ಮಾಡೆಲ್. ನೀವು ಗೆಲ್ಲಿಸಿರುವ ಅಭ್ಯರ್ಥಿ ಅವನು ಪ್ರಭುವಲ್ಲ ಅವನು ಕೆಲಸಗಾರ. ಕರ್ನಾಟಕಕ್ಕೆ ನಿಮ್ಮ ಹಳ್ಳಿ ಸ್ಪೂರ್ತಿ ಎಂದು ಬಣ್ಣಿಸಿದರು.ಅರೇಹಳ್ಳಿ ಗ್ರಾಮಕ್ಕೆ ಉಪೇಂದ್ರ ಬರುತ್ತಿದ್ದಂತೆಯೇ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಬಳಿಕ ಉಪೇಂದ್ರ ಅವರು ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು.Sign in to your account
Username or Email Address


Password

 Remember Me


