ಮೈಸೂರು: ನಟ ದರ್ಶನ್ ಕ್ಯಾಮೆರಾ ಹಿಡಿದು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿಯಲ್ಲಿ ಸ್ನೇಹಿತರ ಜೊತೆಗೆ ಸಫಾರಿ ಮಾಡುತ್ತಿದ್ದಾರೆ.ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿಯಲ್ಲಿ ಆಗಾಗ ಸ್ನೇಹಿತರ ಜೊತೆ ನಟ ದರ್ಶನ್ ಸಫಾರಿ ಮಾಡುತ್ತಿರುತ್ತಾರೆ. ಇದೀಗ ಸಫಾರಿಗೆಂದು ಕಾಡಿಗೆ ಹೋಗಿದ್ದಾರೆ. ಈ ವೇಳೆ ಹುಲಿಯೊಂದು ಕಾಣಿಸಿಕೊಂಡಿದೆ. ಹುಲಿಯ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ದರ್ಶನ್ ಸೆರೆ ಹಿಡಿದಿದ್ದಾರೆ. ದರ್ಶನ್ ಹುಲಿ ಫೋಟೋ ತೆಗೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹೋಳೆ ಅರಣ್ಯದಲ್ಲಿ ನಟ ದರ್ಶನ್ ವೈಲ್ಡ್ ಫೋಟೋಗ್ರಾಫಿಯನ್ನು ಮಾಡುತ್ತಿದ್ದಾರೆ. ಪ್ರಾಣಿ ಪಕ್ಷಿಗಳ ಕುರಿತಾಗಿ ವಿಶೇಷವಾದ ಕಾಳಜಿಯನ್ನು ಹೊಂದಿರುವ ದರ್ಶನ್ ಅವರಿಗೆ ಮೂಕ ಪ್ರಾಣಿಗಳು ಎಂದರೆ ಬಲು ಇಷ್ಟ ಎಂಬುದು ತಿಳಿದಿರುವ ವಿಷಯವಾಗಿದೆ. ವೈಲ್ಡ್ ಫೋಟೋಗ್ರಫಿ ಮಾಡುವುದು ಎಂದರೆ ದರ್ಶನ್ ಅವರಿಗೆ ಇಷ್ಟ. ಸಿನಿಮಾ ಚಿತ್ರೀಕರಣ ಇಲ್ಲದ ಸಮಯದಲ್ಲಿ ಹೆಚ್ಚಾಗಿ ಅವರು ತಾವು ಸಾಕಿರು ಪ್ರಾಣಿಗಳ ಜೊತೆಗೆ ಕಾಲ ಕಳೆಯುತ್ತಾರೆ. ಹಾಗೂ ಸಮಯಸಿಕ್ಕಾಗಲೆಲ್ಲಾ ಅರಣ್ಯಕ್ಕೆ ಹೋಗಿ ಫೋಟೋಗ್ರಫಿಯನ್ನು ಮಾಡುತ್ತಿರುತ್ತಾರೆ. ಸಿನಿಮಾ ಶೂಟಿಂಗ್‍ನಿಂದ ಕೊಂಚ ರಿಲೀಪ್‍ನಲ್ಲಿರವ ದರ್ಶನ್ ಫೋಟೋಗ್ರಾಫಿಯಲ್ಲಿ ಬ್ಯುಸಿಯಾಗಿದ್ದಾರೆ.ಶೂಟಿಂಗ್ ನಡುವೇ ಕೊಂಚ ಬಿಡುವು ಮಾಡಿಕೊಂಡಿರುವ ಯಜಮಾನ ಇದೀಗ ನಾಗರ ಹೊಳೆ ಅಭಯಾರಣ್ಯದಲ್ಲಿ ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಿನ್ಯಾಡಿ ಕಾಡಿಗೆ ಹೋಗಿದ್ದ ದರ್ಶನ್ ಅವರು ಪ್ರಾಣಿ ಪಕ್ಷಿಗಳ ಫೋಟೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಕ್ಯಾಮೆರಾವನ್ನು ಹೆಗಲಿಗೆ ಹಾಕಿಕೊಂಡು ಪ್ರಾಣಿ ಪಕ್ಷಿಗಳ ಫೋಟೋ ತೆಗೆಯುತ್ತಾ ಸಫಾರಿಯನ್ನು ಎಂಜಾಯ್ ಮಾಡುತ್ತಿದ್ದಾರೆ.Sign in to your account
Username or Email Address


Password

 Remember Me


