ಹುಬ್ಬಳ್ಳಿ: ಬೈಕ್ ಸವಾರ ರೋಡ್ ಹಂಪ್ಸ್ ಜಂಪ್ ಮಾಡಿದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ಆಯ ತಪ್ಪಿ ಬಿದ್ದು ಸಾವನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ದಂಪತಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ರಭಸವಾಗಿ ಹಂಪ್ಸ್ ಜಂಪ್ ಮಾಡಿದ್ದು, 31 ವರ್ಷದ ರೂಪಾ ಮೃತಪಟ್ಟಿದ್ದಾರೆ. ಸಿದ್ದಪ್ಪ ಶರೇವಾಡ ಹಾಗೂ ರೂಪಾ ದಂಪತಿ ಶರೇವಾಡ ಗ್ರಾಮದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಬೈಕ್ ಸ್ವಲ್ಪ ವೇಗವಾಗಿ ನೂಲ್ವಿ ಗ್ರಾಮದ ಬಳಿಯ ಹಂಪ್ಸ್ ಜಂಪ್ ಮಾಡಿದ್ದು, ಪರಿಣಾಮ ಬೈಕ್ ನಲ್ಲಿ ಹಿಂಬದಿ ಕುಳತಿದ್ದ ರೂಪಾ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅವೈಜ್ಞಾನಿಕವಾಗಿ ಹಂಪ್ಸ್ ಹಾಕಿದ ಪರಿಣಾಮ ಈ ಘಟನೆ ನಡೆದಿದ್ದು, ಹಂಪ್ಸ್ ತೆಗೆಯಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


