ಚಿಕ್ಕಬಳ್ಳಾಪುರ: ಪ್ರಿಯತಮೆ ಮತ್ತು ಆಕೆಯ ತಾಯಿಯನ್ನ ಕೊಂದು ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ.ಲಕ್ಷ್ಮಿದೇವಿ (50) ಮತ್ತು ರಮಾದೇವಿ (30) ಮೃತ ತಾಯಿ ಮಗಳು. ಓರಿಸ್ಸಾ ಮೂಲದ ಮಲಯಫರೀದ್ ಮದುವೆಯಾಗದೇ ರಮಾದೇವಿ ಸಂಸಾರ ನಡೆಸುತ್ತಿದ್ದನು. ಮದುವೆಗೂ ಮುನ್ನವೇ ಜೋಡಿ ಮಗುವಾಗಿತ್ತು. ಐದು ತಿಂಗಳು ಮಗುವಾದ್ರು ಮಲಯಫರೀದ್ ಮದುವೆಯಾಗಲು ಹಿಂದೇಟು ಹಾಕಿದ್ದನು.5 ತಿಂಗಳ ಮಗುವಿದ್ದ ಕಾರಣ ಮಗಳನ್ನ ಮದುವೆ ಆಗುವಂತೆ ಲಕ್ಷ್ಮಿದೇವಿ ಒತ್ತಾಯಿಸುತ್ತಿದ್ದರು. ಮಧ್ಯರಾತ್ರಿ ತಾಯಿ ಮತ್ತು ಮಗಳ ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಮಗುವಿನ ಜೊತೆ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಎರಡು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ತನಿಖೆ ನಡೆಸುತ್ತಿದ್ದಾರೆ. Sign in to your account
Username or Email Address


Password

 Remember Me


