ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ರಸ್ತೆ ಗುಂಡಿ (Bengaluru Road Potholes) ಮುಚ್ಚಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೀಡಿದ್ದ ಡೆಡ್ ಲೈನ್ ಮುಗಿದ ಕಾರಣ ಅವರು, ಭಾನುವಾರ ತಡರಾತ್ರಿ ಬೆಂಗಳೂರಿನ ರಸ್ತೆ ಕಾಮಗಾರಿ ವೀಕ್ಷಣೆ ನಡೆಸಿದರು. ಇದರಿಂದಾಗಿ ಏಕಾಏಕಿ ಅಧಿಕಾರಿಗಳು ಗಡಿಬಿಡಿಗೊಂಡಿದ್ದರು. ಸದಾಶಿವನಗರದ ತಮ್ಮ ನಿವಾಸದಿಂದ ಡಿಸಿಎಂ ನಗರ ಪ್ರದಕ್ಷಿಣೆಗೆ ಮಾಡಿ, ಹಲವೆಡೆ ರಸ್ತೆ ಪರಿಶೀಲನೆ ನಡೆಸಿದರು. ಡಿಸಿಎಂಗೆ ಶಾಸಕ ಹ್ಯಾರೀಸ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸಾಥ್ ನೀಡಿದರು.ಬೆಂಗಳೂರು ನಗರದ ಜೆಸಿ ರಸ್ತೆ, ಟ್ರಿನಿಟಿ ಜಂಕ್ಷನ್ ಹಾಗೂ ದೊಮ್ಮಲೂರು ಬ್ರಿಡ್ಜ್ ಬಳಿ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದೆ. ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಕೂರುವವನು ನಾನಲ್ಲ. ಕಾಮಗಾರಿಯ ಗುಣಮಟ್ಟವನ್ನು ಕಣ್ಣಾರೆ ನೋಡಿ ಪರಿಶೀಲಿಸುವುದು ಈ ಭೇಟಿಯ ಉದ್ದೇಶವಾಗಿದೆ. ಜಾಗತಿಕ ನಗರವಾಗಿ ಗುರುತಿಸಿಕೊಂಡಿರುವ… pic.twitter.com/AMAT7mcuFS— DK Shivakumar (@DKShivakumar) September 23, 2024ಸಿಲಿಕಾನ್ ಸಿಟಿ, ಟೆಕ್‌ ಹಬ್ ಎಂದೆಲ್ಲ ಖ್ಯಾತಿ ಗಳಿಸಿದ ಬೆಂಗಳೂರು ಗುಂಡಿಗಳ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ರಸ್ತೆ ಗುಂಡಿಗಳ ಬಗ್ಗೆ ʻಪಬ್ಲಿಕ್‌ ಟಿವಿʼ ನಿರಂತರ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಸ್ಪಂದಿಸಿದ್ದ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ (BBMP) ಗಡುವು ನೀಡಿದರು. ಗಡುವು ಮುಕ್ತಾಯಗೊಂಡ ಹಿನ್ನೆಲೆ ಖುದ್ದು ರಸ್ತೆಗಿಳಿದು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಸಿಎಂ ಪಾಲಿಗೆ ಇಂದು ಬಿಗ್ ಡೇ – ಮುಡಾ ಕೇಸಲ್ಲಿ ತನಿಖೆಯೋ? ಸೇಫೋ?; ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ..!ಸುಮಾರು ರಾತ್ರಿ 11:30ರ ವೇಳೆಗೆ ಪ್ರದಕ್ಷಿಣೆ ಆರಂಭಿಸಿದ ಡಿಸಿಎಂ ಮಧ್ಯರಾತ್ರಿ 2 ಗಂಟೆವರೆಗೂ ಪ್ರದಕ್ಷಿಣೆ ನಡೆಸಿದರು. ಖುದ್ದು ರಸ್ತೆಗಿಳಿದ ಡಿಸಿಎಂ, ಜಯಮಹಲ್ ರಸ್ತೆಯ ಪ್ಯಾಚ್ ವರ್ಕ್ ವೀಕ್ಷಣೆ ವೇಳೆ ಆರೆಯಿಂದ ನೆಲಕ್ಕೆ ಗುದ್ದಿ ಪರಿಶೀಲನೆ ನಡೆಸಿದರು. ನಂತರ ಟ್ರಿನಿಟಿ ಜಂಕ್ಷನ್‌ನಲ್ಲಿ ಡಾಂಬರೀಕರಣಕ್ಕೂ ಮುನ್ನ ಮಾಡುವ ಮಿಲ್ಲಿಂಗ್ ಕಾಮಗಾರಿಗಳ ಪರಿಶೀಲಿಸಿದರು. ರಸ್ತೆಯ ಹದಗೆಟ್ಟಿರುವ ಭಾಗವನ್ನು ಮಿಲ್ಲಿಂಗ್ ಮಾಡಿ ಡಾಂಬರೀಕರಣ ಮಾಡುವಂತೆ ಸೂಚಿಸಿದರು. ಬಳಿಕ ಬನಶಂಕರಿ ಮೇಟ್ರೋ ಬಳಿಯ ಬನಶಂಕರಿ ರಸ್ತೆ ಕಾಮಗಾರಿಯನ್ನೂ ಪರಿಶೀಲಿಸಿದರು. ಜೊತೆಗೆ ಪಾಲಿಕೆ ಆಯುಕ್ತರಿಗೆ ರಸ್ತೆ ಬದಿಯಲ್ಲಿ ಅಂಗಡಿ ಹಾಕಿರೋದನ್ನ ತೆಗೆಸಬೇಕು ಅಂತ ಸೂಚನೆ ನೀಡಿದರು. ಇದನ್ನೂ ಓದಿ: ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?14,307 ಗುಂಡಿಗಳನ್ನು ಮುಚ್ಚಿಸಿದ್ದಾರೆ:
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳ ಬಗ್ಗೆ ಮಾಹಿತಿ ಬಂದಿತ್ತು, ಹಾಗಾಗಿ ಗುಂಡಿ ಮುಚ್ಚೋದಕ್ಕೆ ಎಲ್ಲರಿಗೂ ಹೇಳಿದ್ದೆ. ಯಾವುದೇ ಸಮಾಧಾನಕರವಾದ ಕೆಲಸ ನನ್ನ ಗಮನಕ್ಕೆ ಬಂದಿರಲಿಲ್ಲ. 15 ದಿನದ ಹಿಂದೆ ಮೀಟಿಂಗ್ ಮಾಡಿ ಡೆಡ್ ಲೈನ್ ನೀಡಿದ್ದೆ. ಆಯುಕ್ತರು, ಜಂಟಿ ಆಯುಕ್ತರು ಎಲ್ಲರಿಗೂ ಮಾಹಿತಿ ನೀಡಿದ್ದೆ. ಕೆಲಸದ ವಿಡಿಯೋ ಮಾಡಿ ಪೋಸ್ಟ್ ಮಾಡೋದಕ್ಕೆ ಹೇಳಿದ್ದೆ. ಇದುವರೆಗೆ 14,307 ಗುಂಡಿಗಳನ್ನ ಅಧಿಕಾರಿಗಳು ಮುಚ್ಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪುಣೆ ಏರ್‌ಪೋರ್ಟ್ ಹೆಸರು ಬದಲಾವಣೆ – ಜಗದ್ಗುರು ಸಂತ ತುಕಾರಾಂ ನಿಲ್ದಾಣವಾಗಿ ಮರುನಾಮಕರಣಅಧಿಕಾರಿಗಳ ಮಾತಿನ ಮೇಲೆ ನಂಬಿಕೆಯಿಲ್ಲ:
ಎಲ್ಲಾ ವಿಡಿಯೋಗಳು ನನ್ನ ಮೊಬೈಲ್ ಫೋನ್‌ಗೆ ಬಂದಿವೆ. ಸದ್ಯದ ಮಟ್ಟಿಗೆ ಎಲ್ಲವೂ ಸಮಾಧಾನಕರವಾಗಿ ಕಾಣ್ತಾ ಇದೆ. ಆದರೂ ಒಮ್ಮೆ ನಾನು ಪರಿಶೀಲನೆ ಮಾಡಿ ನೋಡಬೇಕು. ಮಳೆ ಕಾರಣದಿಂದ ಕ್ವಾಲಿಟಿ ಮೆಂಟೇನ್ ಮಾಡೋದು ಸ್ವಲ್ಪ ಕಷ್ಟ. ಸರಿಯಾಗಿ ಕೆಲಸ ಆಗದೇ ಇದ್ದರೆ ಖಂಡಿತಾ ತಲೆದಂಡ ಎದುರಿಸಬೇಕಾಗುತ್ತೆ. ನಾಗರೀಕರಿಗೆ ಒಳ್ಳೆದಾಗ್ಬೇಕು, ಗುಂಡಿಯಿಂದ ಯಾರ ಪ್ರಾಣವೂ ಹೋಗಬಾರದು, ನನಗೆ ಪೇಪರ್ ಮತ್ತು ಅಧಿಕಾರಿಗಳ ಮಾತಿನ ಮೇಲೆ ನಂಬಿಕೆ ಇಲ್ಲ. ಎಲ್ಲಾ ನಾನೇ ನನ್ನ ಕಣ್ಣಾರೆ ನೋಡಿ ಸಮಾಧಾನ ಆಗಬೇಕು ಅಂತ ರೌಂಡ್ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.Sign in to your account
Username or Email Address


Password

 Remember Me


