ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ಕಂಡ ಬಳಿಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ಚಿತ್ರ ಮತ್ತೊಮ್ಮೆ ರೆಕಾರ್ಡ್ ಬ್ರೇಕ್ ಮಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.ಚಿತ್ರದ ಟೀಸರ್ ಅದ್ಭುತವಾಗಿದ್ದು, ನನ್ನನ್ನೂ ಸೇರಿದಂತೆ ಎಲ್ಲರೂ ಕೂಡ ಹೆಚ್ಚು ಕಾತರದಿಂದ ಈ ಮಾಸ್ಟರ್ ಪೀಸ್ ಎಂಟ್ರಿಗಾಗಿ ಕಾಯುತ್ತಿದ್ದಾರೆ. ಇದು ಪ್ರೇಕ್ಷಕರಲ್ಲಿ ಹೊಸ ಅಲೆ ಸೃಷ್ಟಿಸುವದರಲ್ಲಿ ಸಂದೇಹವಿಲ್ಲ ಎಂದು ಯಶ್ ಹುಟ್ಟುಹಬ್ಬಕ್ಕೆ ಟ್ಟಿಟರ್ ಮೂಲಕ ಶುಭ ಹಾರೈಸಿದ್ದಾರೆ ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ.ರಕ್ಷಿತ್ ಶೆಟ್ಟಿ ಟ್ವೀಟ್‍ಗೆ ಉತ್ತರಿಸಿರುವ ರಾಕಿಂಗ್ ಸ್ಟಾರ್ ಯಶ್, ಧನ್ಯವಾದಗಳೂ ನಿಮ್ಮ ಮುಂದಿನ ಸಿನಿಮಾಗಳು ಎಲ್ಲವೂ ಯಶಸ್ಸು ಕಾಣಲಿ. ನಾನೂ ನೋಡಲು ಕಾತರನಾಗಿದ್ದೇನೆ ಎಂದು ಮರು ಟ್ಟೀಟ್ ಮಾಡಿದ್ದಾರೆ.Thank you Rakshit..???? everything about your upcoming films looks great! Can't wait!!— Yash (@TheNameIsYash) January 9, 2021ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಚಿತ್ರತಂಡ ಕೆಜಿಎಫ್-2 ಸಿನಿಮಾದ ಟೀಸರ್ ರೀಲಿಸ್ ಮಾಡಲು ಸಿದ್ಧತೆ ಮಾಡಿತ್ತು. ಆದರೆ ಜನವರಿ 7ರ ಸಂಜೆಯೇ ಟೀಸರ್ ನ ಕೆಲ ಕ್ಲಿಪ್ ಗಳು ಲೀಕ್ ಆಗಿತ್ತು. ಹೀಗಾಗಿ ಅದೇ ದಿನ ರಾತ್ರಿ ಚಿತ್ರತಂಡ ಟೀಸರ್ ರೀಲಿಸ್ ಮಾಡಿತ್ತು. ಕೆಜಿಎಫ್-2ರ ಟೀಸರ್ 9 ಕೋಟಿಗೂ ಅಧಿಕ ವೀಕ್ಷಣೆಯಾಗಿ 10 ಕೋಟಿಯತ್ತ ಸಾಗುತ್ತಿದ್ದು ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ.Sign in to your account
Username or Email Address


Password

 Remember Me


