ಧಾರವಾಡ/ಹುಬ್ಬಳ್ಳಿ: ನಾಲ್ಕು ದಿನದ ಹಿಂದೆ ಮಗು ಕಿಡ್ನ್ಯಾಪ್ ಆಗಿದೆ ಅಂತ ದೂರು ದಾಖಲಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಂದು ಪಕ್ಕದ ಮನೆಯಲ್ಲಿಯೇ ಮಗುವಿನ ಶವ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಭಾರತ ನಗರದಲ್ಲಿ ಘಟನೆ ನಡೆದಿದೆ.ಹನುಮಂತಪ್ಪ ಗಾಳಪ್ಪನವರ್ ಪುತ್ರಿ 5 ವರ್ಷದ ಶ್ರೇಯಾ ಶವವಾಗಿ ಪತ್ತೆಯಾದ ಬಾಲಕಿ. ಪಕ್ಕದ ಮನೆಯ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ನಾಲ್ಕು ದಿನದ ಹಿಂದೆಯಷ್ಟೇ ಮಗು ನಾಪತ್ತೆಯಾಗಿದೆ ಅಂತ ದೂರನ್ನು ಕೂಡ ದಾಖಲಿಸಲಾಗಿತ್ತು. ಆದರೆ ಇಂದು ಶವವಾಗಿ ಪತ್ತೆಯಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಹನುಮಂತಪ್ಪ ಗಾಳಪ್ಪನವರ್ ತಮ್ಮದೇ ಇನ್ನೊಂದು ಮನೆಯಲ್ಲಿ ಬಾಡಿಗೆಗೆ ನೀಡಿದ್ದರು. ಇದೀಗ ಅವರ ಮನೆಯಲ್ಲಿ ಶವ ಪತ್ತೆಯಾಗಿದ್ದರಿಂದ ಪೊಲೀಸರು ಬಾಡಿಗೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 Advertisement 







 Advertisement 




Sign in to your account
Username or Email Address


Password

 Remember Me


