ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಕ್ ಸ್ಟಾರ್ ಯಶ್ ಅಭಿನಯದ ಕೆಜೆಎಫ್-2 ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಮೂಲಕ ಚಿತ್ರದ ಟೀಸರ್ ಎಲ್ಲಾ ಯೂಟ್ಯೂಬ್ ದಾಖಲೆಗಳನ್ನು ಪುಡಿಗೈದಿದೆ.ಚಿತ್ರದ ಟೀಸರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೂವರೆಗೂ ಸುಮಾರು 9 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 10 ಕೋಟಿಯತ್ತ ದಾಂಗುಡಿ ಇಡುತ್ತಿದೆ. ಈ ಸಂಬಂಧ ನಟ ಯಶ್ ಕೂಡ ಸಂತಸ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್- 2 ಫೋಟೋ ಹಾಕಿ ಬರೆದುಕೊಂಡಿರುವ ರಾಕಿಂಗ್ ಸ್ಟಾರ್, ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಈ ನಿಮ್ಮ ಪ್ರೀತಿ ಇಂದು ನನ್ನ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.Your love for me has manifested as the best bday for me today. Thank you.. love you all ❤️ pic.twitter.com/DhCAAxj0Hu— Yash (@TheNameIsYash) January 8, 2021ನಿನ್ನೆ ರಾಕಿಬಾಯ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಟೀಸರ್ ರಿಲೀಸ್ ಮಾಡುವ ಸಿದ್ಧತೆಯಲ್ಲಿತ್ತು. ಆದರೆ ಗುರುವಾರ ಸಂಜೆಯೇ ಟೀಸರ್ ಲೀಕ್ ಆಗಿತ್ತು. ಹೀಗಾಗಿ ಅದೇ ದಿನ ರಾತ್ರಿ 9.29ಕ್ಕೆ ಚಿತ್ರತಂಡ ಟೀಸರ್ ರಿಲೀಸ್ ಮಾಡಿತ್ತು. ಕೆಜಿಎಫ್-2 ರ ಟೀಸರ್ ಬಿಡುಗಡೆಯಾದ ನಂತರ ಯಶ್ ಅವರ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ. ಟೀಸರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಆ ಮೂಲಕ ಕನ್ನಡದ ಸೂಪರ್ ಸ್ಟಾರ್ ಈಗ ದೇಶದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್-2 ರ ಟೀಸರ್ ನಲ್ಲಿ ಮಾಸ್ ಹೀರೋ ಆಗಿ ಗಮನ ಸೆಳೆದಿದ್ದಾರೆ. ಇನ್ನೊಂದೆಡೆಗೆ ಅವರ ಪ್ರತಿಸ್ಪರ್ಧಿ ಅಧೀರಾ ಪಾತ್ರದಲ್ಲಿ ಸಂಜಯ್ ದತ್ ಲುಕ್ ಕೂಡ ಅಷ್ಟೇ ಅದ್ಧೂರಿಯಾಗಿ ಮೂಡಿ ಬಂದಿದೆ. ಇನ್ನೊಂದೆಡೆಗೆ ರಾಜಕಾರಣಿ ಪಾತ್ರದಲ್ಲಿ ರವೀನಾ ಟಂಡನ್ ಕೂಡ ರಫ್ ಅಂಡ್ ಟಫ್ ಎನ್ನುವಂತೆ ಕಾಣಿಸಿಕೊಂಡಿದ್ದಾರೆ.  A post shared by Yash (@thenameisyash)






 Advertisement 




Sign in to your account
Username or Email Address


Password

 Remember Me


