ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್‍ಗೆ 34ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇದೀಗ ನಟನ ಬರ್ತ್ ಡೇಗೆ ಶುಭಾಶಯಗಳ ಸುರಿಮಳೆಗಳೇ ಹರಿದು ಬರುತ್ತಿದೆ. ಪತ್ನಿ, ನಟಿ ರಾಧಿಕಾ ಪಂಡಿತ್ ಕೂಡ ಪತಿಯ ಜನ್ಮದಿನಕ್ಕೆ ಶುಭಕೋರಿದ್ದಾರೆ.ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ರಾಧಿಕಾ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ನೀವು ಯಾಕೆ ನನಗೆ ತುಂಬಾ ಪರಿಪೂರ್ಣವಾಗಿದ್ದೀರಿ ಅಂತ ಕೆಲವೊಮ್ಮೆ ನಾನು ಅಚ್ಚರಿಗೊಳಗಾಗುತ್ತೇನೆ. ಆಮೇಲೆ ನನಗೆ ಅದರ ಅರಿವಾಗುತ್ತೆ. ನಿಮ್ಮ ಹುಟ್ಟುಹಬ್ಬದ ಕೇಕ್‍ನಲ್ಲಿ ನನಗೂ ಪಾಲಿದೆ. ಜನ್ಮದಿನದ ಶುಭಾಶಯಗಳು ಗೆಳೆಯಾ ಎಂದು ಬರೆದುಕೊಂಡಿದ್ದಾರೆ.  A post shared by Radhika Pandit (@iamradhikapandit)ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್-2 ಚಿತ್ರತಂಡ ಇಂದು ಬೆಳಗ್ಗೆ 10.18ಕ್ಕೆ ಸಿನಿಮಾದ ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿತ್ತು. ಆದರೆ ನಿನ್ನೆ ರಾತ್ರಿ ದಿಢೀರ್ ಆಗಿ ಕೆಜಿಎಫ್ ಸಿನಿಮಾ ಟೀಸರ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿತ್ತು. ಈ ವೀಡಿಯೋ ವೈರಲ್ ಆಗಿ ಟ್ರೆಂಡಿಂಗ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಗುರುವಾರ ರಾತ್ರಿ 9:02ಕ್ಕೆ ಟ್ವೀಟ್ ಮಾಡಿ ರಾತ್ರಿ 9:29ಕ್ಕೆ ರಿಲೀಸ್ ಮಾಡುತ್ತೇವೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.ಇನ್ನು ಟೀಸರ್ ಲೀಕ್ ಆಗಿದ್ದಕ್ಕೆ ನಟ ಯಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಅಭಿಮಾನಿಗಳು ನಿರಾಶರಾಗದಂತೆ ಮನವಿ ಮಾಡಿದ್ದರು. ಈ ಕುರಿತು ವೀಡಿಯೋ ಸಂದೇಶ ಹಂಚಿಕೊಳ್ಳುವ ಮೂಲಕ ಮಾತನಾಡಿದ್ದ ಯಶ್, ನಾಳೆ(ಶುಕ್ರವಾರ) ಬೆಳಗ್ಗೆ ರಿಲೀಸ್ ಆಗಬೇಕಿದ್ದ ಟೀಸರ್ ಅನ್ನು ಯಾರೋ ಪುಣ್ಯಾತ್ಮರು ಲೀಕ್ ಮಾಡಿದ್ದಾರೆ. ಅವರಿಗೆ ಏನ್ ಸಂತೋಷ ಸಿಗುತ್ತೋ ಗೊತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅಭಿಮಾನಿಗಳು ತುಂಬಾ ಆಸೆಗಳನ್ನು ಇಟ್ಟುಕೊಂಡು ಸಂಭ್ರಮಿಸಲು ಕಾಯುತ್ತಿದ್ದೀರಿ. ಇದೀಗ ಹೊಂಬಾಳೆ ಯೂಟ್ಯೂಬ್ ಚಾನಲ್‍ನಲ್ಲಿ ರಾತ್ರಿ 9.29ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಟೀಸರ್ ನೋಡಿ, ಸಿನಿಮಾ ಇನ್ನೂ ಬಾಕಿ ಇದೆ ಎಂದು ತಿಳಿಸಿದ್ದರು.Sign in to your account
Username or Email Address


Password

 Remember Me


