ಬೆಂಗಳೂರು: ವಿಚಾರಣೆ ಎಲ್ಲ ಮುಗಿದಿದೆ. ಮತ್ತೆ ಅಧಿಕಾರಿಗಳು ಕರೆದ್ರೆ ಬರುತ್ತೇನೆ. ಹೆದರಿ ಓಡಿ ಹೋಗುವ ಕೆಲಸ ನಾನು ಮಾಡಿಲ್ಲ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.ಕೋಟಿ ಕೋಟಿ ಆಸ್ತಿ ಗಳಿಕೆ ಮತ್ತು ಯುವರಾಜ್ ಜೊತೆಗಿನ ಹಣಕಾಸಿನ ವ್ಯವಹಾರದ ಸಂಬಂಧ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ನೋಟಿಸ್ ನೀಡಿತ್ತು. ನೋಟಿಸ್ ಹಿನ್ನೆಲೆ ಇಂದು ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ರಾಧಿಕಾ ಆಗಮಿಸಿದ್ದರು. ವಿಚಾರಣೆ ವೇಳೆ ಬಂಧಿತ ಯುವರಾಜ್ ಮತ್ತು ರಾಧಿಕಾ ಕುಮಾರಸ್ವಾಮಿ ಅವರನ್ನ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ಸತತ ನಾಲ್ಕು ಗಂಟೆ ವಿಚಾರಣೆ ಎದುರಿಸಿ ಹೊರ ಬಂದ ಸ್ವೀಟಿ, ಏನು ತೊಂದರೆಯೂ ಇಲ್ಲ. ದಾಖಲೆಗಳು ಸಹ ಇಲ್ಲ. ವಿಚಾರಣೆ ಮುಗಿದಿದ್ದು, ಮತ್ತೆ ಕರೆದ್ರೆ ಅಧಿಕಾರಿಗಳ ತನಿಖೆಗೆ ಸಹಕರಿಸುತ್ತೇನೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಿದ್ದೇನೆ. ವಿಚಾರಣೆಯಲ್ಲಿ ಏನಾಯ್ತು ಅನ್ನೋದನ್ನ ಇಲ್ಲಿ ಚರ್ಚೆ ಮಾಡಲು ಆಗಲ್ಲ. ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ಎಲ್ಲಿಯೂ ಹೋಗಿಲ್ಲ. ಹೆದರಿ ಓಡಿ ಹೋಗುವ ಕೆಲಸ ಮಾಡಿಲ್ಲ. ನನಗೋಸ್ಕರ ಕುಟುಂಬಸ್ಥರು ವೇಟ್ ಮಾಡುತ್ತಿದ್ದು, ಅಲ್ಲಿಗೆ ಹೋಗ್ತಿದ್ದೇನೆ ಎಂದರು.Sign in to your account
Username or Email Address


Password

 Remember Me


