ಚಾಮರಾಜನಗರ: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಹಾಸ್ಟೇಲ್‍ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆದಾಡುತ್ತಿರು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.ಮುಖ್ಯ ದ್ವಾರದ ಮೂಲಕ ಹಾಸ್ಟೆಲ್ ಗೆ ಚಿರತೆ ಪ್ರವೇಶ ಪಡೆದಿದೆ. ಹಾಸ್ಟೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟದ ದೃಶ್ಯ ಸೆರೆಯಾಗಿದೆ.ಹಾಸ್ಟೆಲ್ ಒಳನುಗ್ಗಿದ ಚಿರತೆ ಸಿಬ್ಬಂದಿಯ ಶಬ್ದ ಕೇಳಿ ಮತ್ತೆ ಹೊರಹೋಗಿದೆ. ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ ಕೂಡ ಭಯಭೀತರಾಗಿದ್ದಾರೆ. ಮೆಡಿಕಲ್ ಕಾಲೇಜಿನ ಪಕ್ಕದಲ್ಲಿ ಯಡಬೆಟ್ಟವಿದ್ದು ಬೆಟ್ಟದಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಚಿರತೆ ಸೆರೆಹಿಡಿಯುವಂತೆ ಜನ ಆಗ್ರಹಿಸಿದ್ದಾರೆ.ಚಿರತೆ ಹಾಸ್ಟೆಲ್ ಕಟ್ಟಡದಲ್ಲಿ ಓಡಾಡುತ್ತಿರುವ ವಿಡಿಯೋ ತುಣುಕನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಸುಮಾರು 8,000 ಜನ ವೀಕ್ಷಿಸಿದ್ದಾರೆ.When a black panther comes for college inspection. Karnataka. @anil_lulla pic.twitter.com/754rGgRBx4— Parveen Kaswan, IFS (@ParveenKaswan) January 7, 2021Sign in to your account
Username or Email Address


Password

 Remember Me


