ಕೊಪ್ಪಳ: ಎಕ್ಸಿಕ್ಯೂಟಿವ್ ಎಂಜಿನಿಯರ್ ಪತ್ನಿ ಹಾಗೂ ಮಹಿಳೆಯ ನಡುವೆ ಮಾರಾಮಾರಿ ನಡೆದ ಘಟನೆ ಕೊಪ್ಪಳದ ಕುಷ್ಟಗಿ ಸರ್ಕಲ್ ನ ಯಶೋಧಾ ಆಸ್ಪತ್ರೆಯ ಹಿಂದೆ ಮನೆಯಲ್ಲಿ ನಡೆದಿದೆ.ಸಣ್ಣ ನೀರಾವರಿ ಇಲಾಖೆ ಕೊಪ್ಪಳ ಉಪ ವಿಭಾಗದ ಇಇ ಮನೆಯಲ್ಲಿ ಈ ಮರಾಮಾರಿ ನಡೆದಿದೆ. ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ವಿನೋದ್ ಕುಮಾರ್ ಗುಪ್ತ ಲವ್ವಿಡವ್ವಿ ಸ್ಟೋರಿ ಇದಾಗಿದೆ.ನನ್ನ ಪತಿ ಜೊತೆ ಅನೈತಿಕ ಸಂಬಂಧ ಇದೆ ಎಂದು ಗುಪ್ತಾ ಪತ್ನಿ ಆರೋಪಿಸಿದ್ದಾರೆ. ಗುಪ್ತನ ಅನೈತಿಕ ಸಂಬಂಧವನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಮನೆಯಲ್ಲಿ ಗುಪ್ತಾ ಪತ್ನಿ ಮತ್ತು ಮತ್ತೊಬ್ಬ ಮಹಿಳೆ ಕೈ ಕೈ ಮಿಲಾಯಿಸಿದ್ದಾರೆ.ಹಲವಾರು ವರ್ಷಗಳಿಂದ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿ ಇದೀಗ ಪರನಾರಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ಅಧಿಕಾರಿಯ ಹೆಂಡತಿ ಮಕ್ಕಳಿಂದ ಮಹಿಳೆಗೆ ಗೂಸಾ ಸಿಕ್ಕಿದೆ. ಇದರಿಂದ ಆಕ್ರೋಶಗೊಂಡ ಇಇ ಪತ್ನಿ ಹಾಗೂ ಮಕ್ಕಳು, ಮಹಿಳೆಗೆ ಸಖತ್ ಗೂಸಾ ನೀಡಿದ್ದಾರೆ.Sign in to your account
Username or Email Address


Password

 Remember Me


